ಮೈಸೂರು

ವಿಕಲಚೇತನರು ಸಕಾರಾತ್ಮಕವಾಗಿ ಬದುಕನ್ನು ಸ್ವೀಕರಿಸುವ ಮನಸ್ಸನ್ನು ಬೆಳೆಸಿಕೊಳ್ಳಬೇಕು : ತಹಶೀಲ್ದಾರ್ ಐ.ಇ.ಬಸವರಾಜು

ಮೈಸೂರು,ಡಿ.18:- ವಿಕಲಚೇತನರು ಸಕಾರಾತ್ಮಕವಾಗಿ ಬದುಕನ್ನು ಸ್ವೀಕರಿಸುವ ಮನಸ್ಸನ್ನು ಬೆಳೆಸಿಕೊಳ್ಳಬೇಕು ಎಂದು ತಹಶೀಲ್ದಾರ್ ಐ.ಇ.ಬಸವರಾಜು ತಿಳಿಸಿದರು.

ಅವರು ನಿನ್ನೆ ಹುಣಸೂರು ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ  ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ವಿಕಲಚೇತನರಿಗಾಗಿ  ಆಯೋಜಿಸಿದ್ದ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯರಾದ ನಾವೆಲ್ಲರೂ ಅಂಗವಿಕಲರೇ ಆಗಿದ್ದೇವೆ. ಕೆಲವರ ವಿಕಲತೆ ಕಣ್ಣಿಗೆ ಕಾಣಿಸಿದರೆ ಮತ್ತೆ ಕೆಲವರದ್ದು ಕಾಣಿಸುವುದಿಲ್ಲ ಎಂದರು.

ಈ ಭೂಮಿಯ ಮೇಲೆ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕು ಇದೆ.  ಅಂಗವಿಕಲರಲ್ಲಿ ಹುದುಗಿರುವ ಪ್ರತಿಭೆ, ಶಕ್ತಿಯನ್ನು ಹೊರತೆಗೆಯುವ ಕೆಲಸ ಸಮುದಾಯದ ಮೇಲಿದೆ. ಸಾಧನೆಗೆ ವಿಕಲತೆ ಅಡ್ಡಿಯಾಗಬಾರದು. ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಬದುಕನ್ನು ಸ್ವೀಕರಿಸುವ ಮನಸ್ಸನ್ನು ಬೆಳೆಸಿಕೊಳ್ಳಬೇಕು ಎಂದರು.

ಓಟದ ಸ್ಪರ್ಧೆ, ಸಂಗೀತ ಕುರ್ಚಿ, ಗುಂಡುಎಸೆತ, ಗಾಯನ, ತ್ರಿಚಕ್ರ ಬೈಸಿಕಲ್ ರೇಸ್‌ನಲ್ಲಿ ವಿಕಲಚೇತನರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್, ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಮೇಲ್ವಿಚಾರಕಿ ಪೂಜಾ, ಸ್ವಾಮಿಗೌಡ, ಆರೋಗ್ಯ ಕಾರ್ಯಕರ್ತರಾದ ಚಂದ್ರೇಶ್, ನವೀನ್, ಮಾದೇಶ್, ಫರೀನಾ, ಹರೀಶ್, ಶಿಕ್ಷಣ ಇಲಾಖೆ ಸಿಬ್ಬಂದಿ ಚಿಲ್ಕುಂದ ಮಹೇಶ್, ತ್ರೀನೇಶ್, ತಾಲೂಕಿನ ಸಬ್ಬನಹಳ್ಳಿಯ ಸ್ನೇಹಬಳಗ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಸೇರಿ 100ಕ್ಕೂ ಹೆಚ್ಚು ಅಂಗವಿಕಲರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ನೀಡುವ ಮೂಲಕ  ಪ್ರೋತ್ಸಾಹಿಸಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: