ಮೈಸೂರು

  ಜಾಮೀಯಾ ಮಿಲಿಯಾ  ಇಸ್ಲಾಮಿಯಾ ವಿ.ವಿ ಹಾಗೂ ಅಲಿಘರ್ ಮುಸ್ಲಿಮ್ ವಿವಿ ಯ ವಿದ್ಯಾರ್ಥಿಗಳ ಮೇಲೆ  ಗುಂಡಿನ ದಾಳಿ ಖಂಡಿಸಿ ಮಂಜಿನ ಮೆರವಣಿಗೆ 

ಮೈಸೂರು,ಡಿ.18:- ಜಾಮೀಯಾ ಮಿಲಿಯಾ  ಇಸ್ಲಾಮಿಯಾ ವಿ.ವಿ, ಆಲಿಘಡ್ ಮುಸ್ಲಿಂ ವಿ.ವಿ ಸೇರಿದಂತೆ ದೇಶಾವ್ಯಾಪಿ ಕೋಮು ಪಕ್ಷಪಾತದ ಆಧಾರಿತವಾದ ನಾಗರೀಕತ್ವ(ತಿದ್ದುಪಡಿ) ಮಸೂದೆಯನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳ ಮೇಲೆ ಪೋಲಿಸರು ಗುಂಡಿನ ದಾಳಿಯನ್ನು ನಡೆಸಿರುವುದು ಮತ್ತು ದೌರ್ಜನ್ಯವನ್ನು ಎಸಗುತ್ತಿರುವುದನ್ನು ವಿರೋಧಿಸಿ ಮತ್ತು ಇಡೀ ದೇಶವ್ಯಾಪಿ ವಿರೋಧಿಸಲ್ಪಡುತ್ತಿರುವ,  ಕೋಮು ಪಕ್ಷಪಾತದ ಆಧಾರಿತವಾದ ನಾಗರೀಕತ್ವ(ತಿದ್ದುಪಡಿ) ಮಸೂದೆಯನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿ ಸಮುದಾಯಕ್ಕೆ   ಬೆಂಬಲ ಸೂಚಿಸಿ ನಿನ್ನೆ  ವಿ.ವಿ ಯ ವಿದ್ಯಾರ್ಥಿಗಳು ವಿ.ವಿ ಯ ಆವರಣದ ಗಡಿಯಾರ ವೃತ್ತದಿಂದ ಕುವೆಂಪು ಪುತ್ಥಳಿಯವರೆಗೆ ಪಂಜಿನ ಮೆರವಣಿಗೆಯನ್ನು ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆಯ ಜಿಉಲ್ಲಾ ಕಾರ್ಯದರ್ಶಿಗಳಾದ ಚಂದ್ರಕಲಾ, ಇಡೀ ದೇಶವ್ಯಾಪಿ ವಿರೋಧಿಸಲ್ಪಡುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ಈ ದೇಶದ ಅಂತಃಸತ್ವವಾದ ಜಾತ್ಯಾತೀತತೆ ಮತ್ತು ಕೋಮು ಸೌಹರ್ದತೆ ಪರಿಕಲ್ಪನೆಗಳಿಗೆ ಕೊಡಲಿ ಪೆಟ್ಟು ಕೊಡಲು ಹೊರಟಿದೆ, ಅದಲ್ಲದೇ ಪ್ರತಿಭಟನಾ ನಿರತ ವಿವಿಧ ವಿ.ವಿ ಯ ವಿದ್ಯಾರ್ಥಿಗಳ ಮೇಲೆ ಪೊಲೀಸರ ಮೂಲಕ ಕ್ರೂರ ದಬ್ಬಾಳಿಕೆ ನಡೆಸಿ ಪ್ರತಿಭಟನೆಯ ಹಕ್ಕನ್ನು ಸಹ ಕಿತ್ತುಕೊಳ್ಳಲು ಹೊರಟಿದೆ ಎಂದು ಕಿಡಿಕಾರಿದರು.  ಪೊಲೀಸರು ಜಾಮೀಯಾ ವಿ.ವಿ ಗೆ ಪೂರ್ವಾನುಮತಿಯಿಲ್ಲದೆ ನುಗ್ಗಿದ್ದಲ್ಲದೇ ಗ್ರಂಥಾಲಯ, ಶೌಚಾಲಯ ಮುಂತಾದ ಕಡೆಗಳಿಗೂ ದಾಳಿ ಮಾಡಿ ವಿದ್ಯಾರ್ಥಿಗಳನ್ನು ಥಳಿಸಿದ್ದಾರೆ. ಇದ್ಯಾವ ಸೀಮೆಯ ಪರಂಪರೆ ಎಂದು ಪ್ರಶ್ನಿಸಿದರು, “ನಮ್ಮದು ರಾಮ್‍ ಪ್ರಸಾದ್ ಬಿಸ್ಮಿಲ್ಲಾ, ಅಶ್ಫಕುಲ್ಲಾ ಖಾನ್ ಒಟ್ಟೊಟ್ಟಿಗೆ ದೇಶದ ಸ್ವಾತಂತ್ರ್ಯಕ್ಕಾಗಿ ಗಲ್ಲಿಗೆ ಹೋದ ಪರಂಪರೆಯಿರುವ ದೇಶ” ಇದನ್ನು ಆಳುವ ಸರ್ಕಾರ ಅರಿತುಕೊಳ್ಳಬೇಕು, ದೇಶವನ್ನು ಒಡೆದು ಆಳುವ ಪ್ರಯತ್ನ ಮಾಡಿದರೆ ಸಹಿಸಲಾಗದು ಎಂದು ಎಚ್ಚರಿಸಿದರು.

ಎಸ್.ಎಫ್.ಐ ನ ವಸಂತ್ ಕಲಾಲ್ ಮಾತನಾಡಿ  ದೇಶದ ವಿವಿಧ ಸಮಸ್ಯೆಗಳನ್ನು ಪರಿಹರಿಸಬೇಕಿದ್ದ ಸರ್ಕಾರ ಅದನ್ನೆಲ್ಲ ಮರೆಮಾಚಲು ಇಂತಹ ಪ್ರಯತ್ನಗಳನ್ನು ಮಾಡುತ್ತಿದೆ. ಇದನ್ನು  ವಿದ್ಯಾರ್ಥಿಗಳು ವಿರೋಧಿಸಬೇಕಾದ ಅವಶ್ಯಕತೆ ಇದೆ ಎಂದರು

ವಿ,ವಿ ಸಂಶೋಧಕರ ಸಂಘದ ಅಧ್ಯಕ್ಷರಾದ ಮರಿದೇವ, ಎಐಡಿಎಸ್‍ಓನ ಅಸೀಯಾ ಬೇಗಂ, ನಿತಿನ್, ವೆಂಕಟೇಶ್, ಸುಮಾ, ಬಸವರಾಜು,ವಿ,ವಿ ಸಂಶೋಧಕರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ  ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: