ಮೈಸೂರು

ಜಿ.ಎಸ್.ಎಸ್.ಎಸ್. ವಿದ್ಯಾರ್ಥಿಗಳ ಸಾಹಿತ್ಯಿಕ ಸಾಧನೆ

ಮೈಸೂರು,ಡಿ.18:- ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಗೀತಾ ಶಿಶು ಶಿಕ್ಷಣ ಸಂಘದ ಬದರಿಪ್ರಸಾದ್‍ಜಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು  ಇತ್ತೀಚೆಗೆ ಸೇಪಿಯಂಟ್ ಕಾಮರ್ಸ್ & ಮ್ಯಾನೇಜ್‍ಮೆಂಟ್ ಕಾಲೇಜು ಆಯೋಜಿಸಿದ್ದ ಇಂಪೀರಿಯಮ್ – 2019ರಲ್ಲಿ ಭಾಗವಹಿಸಿದ್ದರು.

ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ಮೊಹಮ್ಮದ್ ರಹೀಶ್ ಸಾಹಿತ್ಯದ ವಿವಿಧ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನದೊಂದಿಗೆ ಟ್ರೋಫಿ, ಪ್ರಶಸ್ತಿ ಪತ್ರ ಮತ್ತು   3000ರೂ. ನಗದು ಹಾಗೂ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾದ ಯಶವಂತ್ ಮೋಹನ್ ಛಾಯಾಗ್ರಹಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನದೊಂದಿಗೆ ಟ್ರೋಫಿ, ಪ್ರಶಸ್ತಿ ಪತ್ರ ಮತ್ತು   1500ರೂ. ನಗದು ಬಹುಮಾನಗಳನ್ನು ಪಡೆದಿರುತ್ತಾರೆ.  ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಕಾರ್ಯಕ್ರಮದ ಮಾರ್ಗದರ್ಶಕರಾದ ಗಣಕ ವಿಜ್ಞಾನ ಉಪನ್ಯಾಸಕಿ   ಚೈತ್ರ ಪಿ. ಅವರುಗಳಿಗೆ ಸಂಘದ ಆಡಳಿತ ಮಂಡಳಿಯವರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಶುಭ ಹಾರೈಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: