ಕರ್ನಾಟಕಮನರಂಜನೆ

‘ನನಗೆ ಅವಕಾಶ ಕೊಡಿಸಿದ್ದರೆ ಸಾಬೀತು ಪಡಿಸಲಿ’ : ಸುದೀಪ್ ಹೇಳಿಕೆಗೆ ದರ್ಶನ್ ಬೇಸರ

ಬೆಂಗಳೂರು : ಮೆಜೆಸ್ಟಿಕ್ ಸಿನಿಮಾದಲ್ಲಿ ನನಗೆ ಅವಕಾಶ ಕೊಡಿಸಿದ್ದಾಗಿ ಹೇಳಿರುವ ನಟ ಸುದೀಪ್ ಹೇಳಿಕೆಗೆ ನಟ ದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ ವೇಳೆ ಸುದೀಪ್‌ ನೀಡಿದ್ದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ದರ್ಶನ್‌, “ಸುದೀಪ್‌ ಮತ್ತು ನಾನು ಸ್ನೇಹಿತರಲ್ಲ. ಕನ್ನಡಚಿತ್ರರಂಗಕ್ಕೆ ಕೆಲಸ ಮಾಡುತ್ತಿರುವ ಕಲಾವಿದರು ಅಷ್ಟೇ” ಎಂದು ಟ್ವೀಟ್ ಮಾಡಿದ್ದಾರೆ. ನನಗೆ ಮೆಜೆಸ್ಟಿಕ್ ಸಿನಿಮಾದಲ್ಲಿ ಪ್ರಮುಖ ಅವಕಾಶ ಸಿಗಲು ತಾವೇ ಕಾರಣ ಎಂಬಂತೆ ಸುದೀಪ್ ಮಾತನಾಡಿದ್ದಾರೆ. ಆ ಸಿನಿಮಾದಲ್ಲಿ ಅವಕಾಶ ಸಿಗಲು ಕಾರಣರಾದವರು ರಾಮಮೂರ್ತಿ, ರಮೇಶ್ ಮತ್ತು ಪಿ.ಎನ್ ಸತ್ಯ ಎಂದು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

“ನನ್ನ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿಲ್ಲ, ಸುದೀಪ್ ಸಂದರ್ಶನದ ವಿಡಿಯೋ ನೋಡಿ ನೋವಾಗಿ ನಾನೇ ಬರೆದಿದ್ದೇನೆ” ಎಂದು ದರ್ಶನ್ ಸ್ಪಷ್ಟನೆ ನೀಡಿದ್ದಾರೆ. ಮೆಜೆಸ್ಟಿಕ್ ಸಿನಿಮಾದಲ್ಲಿ ನಟಿಸಲು ಪಾತ್ರ ಮಾಡಲು ಸುದೀಪ್ ಸಹಕಾರ ನೀಡಿದ್ದರ ಬಗ್ಗೆ ಅವರು ಸ್ಪಷ್ಟನೆ ನೀಡಬೇಕು ಎಂದು ದರ್ಶನ್ ಆಗ್ರಹಿಸಿದ್ದಾರೆ.

Leave a Reply

comments

Related Articles

error: