ಮೈಸೂರು

ಸೈಬರ್ ಸೆಕ್ಯುರಿಟಿಗೆ ಬೇಕಾದಂತಹ ಅನುಕೂಲಗಳನ್ನು ಮೈಸೂರಿನಲ್ಲಿ ನಿರ್ಮಿಸಿದರೆ ಅದು ಕೂಡ ಮೈಸೂರನ್ನು ಪ್ರತಿನಿಧಿಸಲಿದೆ : ರಾಜವಂಶಸ್ಥ ಯದುವೀರ್ ಅಭಿಮತ

ಮೈಸೂರು,ಡಿ.18:- ಸೈಬರ್ ಸೆಕ್ಯುರಿಟಿಗೆ ಬೇಕಾದಂತಹ ಅನುಕೂಲಗಳನ್ನು ಇಸ್ರೇಲ್ ಸಹಾಯ ಪಡೆದು ಮೈಸೂರಿನಲ್ಲಿ ನಿರ್ಮಿಸಿದರೆ ಅದು ಕೂಡ ಮೈಸೂರನ್ನು ಪ್ರತಿನಿಧಿಸಲಿದೆ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಅಭಿಪ್ರಾಯಪಟ್ಟರು.

ಅವರಿಂದು ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಹೋಟೆಲ್ ನಲ್ಲಿ ನಡೆದ  ಸಿಐಐ ವಾರ್ಷಿಕ ಐಟಿ/ಐಟಿಇಎಸ್ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸೈಬರ್ ಸೆಕ್ಯುರಿಟಿ ಮತ್ತು ಐಒಟಿ ಡೆಸ್ಟಿನೇಶನ್ ಕುರಿತು ಮಾತನಾಡಿದರು.

ಇಂದಿನ ದಿನಗಳಲ್ಲಿ ನಮ್ಮಲ್ಲೇ ದೊರಕುವ ಸಂಪನ್ಮೂಲಗಳಿಂದ ನಮಗೆ ಬೇಕಾದಂತಹ ಅನುಕೂಲತೆಗಳನ್ನು ಪಡೆಯಬಹುದು. ಅವುಗಳಿಗೆ ಬೇಕಾದ ಅವಶ್ಯಕ ಭದ್ರತೆಯನ್ನು ಕೂಡ ನಾವೇ ಕಂಡು ಹಿಡಿದುಕೊಳ್ಳುವ ಸಂಪನ್ಮೂಲಗಳು ನಮ್ಮಲ್ಲಿಯೇ ಇವೆ. ಹಿಂದೆ ಮಣ್ಣು ಪರೀಕ್ಷೆ ಮಾಡಲು ಯೂರೋಪ್ ದೇಶವನ್ನು ಆಶ್ರಯಿಸುತ್ತಿದ್ದೆವು. ಆದರೆ ಈಗ ನಮ್ಮಲ್ಲಿಯೇ ಅನುಕೂಲತೆಗಳು ಇವೆ. ಮೈಸೂರಿನ ಹೆಸರಿನಲ್ಲಿಯೇ ಹಲವಾರು ಗುರುತಿಸುವಂತಹ ವಸ್ತುಗಳು ಇವೆ. ಮೈಸೂರು ಮಲ್ಲಿಗೆ, ಮೈಸೂರು ಪಾಕು, ಮೈಸೂರು ಸ್ಯಾಂಡಲ್ ಸೋಪು, ಮೈಸೂರು ಸಿಲ್ಕ್ ಸ್ಯಾರಿ ಇನ್ನು ಮುಂತಾದವುಗಳಿವೆ. ಇವು ಮೈಸೂರಿನ ಹೆಸರನ್ನು ವಿಶ್ವಾದ್ಯಂತ ಪಸರಿಸುತ್ತಿವೆ. ಅಂತಹ ದೇಶವಾದ ಇಸ್ರೇಲ್ ಸಹಾಯ ಪಡೆದು  ಸೈಬರ್ ಸೆಕ್ಯುರಿಟಿಗೆ ಬೇಕಾದಂತಹ ಅನುಕೂಲಗಳನ್ನು ಮೈಸೂರಿನಲ್ಲಿ ನಿರ್ಮಿಸಿದರೆ ಅದು ಕೂಡ ಮೈಸೂರನ್ನು ಪ್ರತಿನಿಧಿಸಲಿದೆ.ಅದು ಇಲ್ಲಿಂದಲೇ ಆದರೆ ಖಂಡಿತ ಸಂತಸವಾಗುತ್ತದೆ ಎಂದರು.

ಈ ಸಮಾರಂಭದಲ್ಲಿ ಕೆಎಸ್ ಶಂಕರ ಪ್ರಸಾದ್, ಭಾಸ್ಕರ್ ಕಳಲೆ,  ಶೈಲೇಂದ್ರ ಕುಮಾರ್ ತ್ಯಾಗಿ,    ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಮಹಾನಿರ್ದೇಶಕ ಡಾ.ಓಂಕಾರ್ ರೈ, ರಘು ರಾಘವ ಲಿಂಗೇಗೌಡ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: