ಮೈಸೂರು

ಓ.ಎಫ್.ಸಿ ಕೇಬಲ್ ಅಳವಡಿಕೆ ವೇಳೆ ನಿಯಮ ಉಲ್ಲಂಘನೆ : ಆಯುಕ್ತರ ಗಮನಕ್ಕೆ ಬಂದಿದ್ದರಿಂದ ದಂಡ : ಮೇಯರ್ ಪುಷ್ಪಲತಾ ಜಗನ್ನಾಥ್

ಮೈಸೂರು,ಡಿ.18:- ಓ.ಎಫ್.ಸಿ ಕೇಬಲ್ ಅಳವಡಿಕೆ ವೇಳೆ ನಿಯಮ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ  ಪಾಲಿಕೆ ದಂಡ ವಿಧಿಸಿದೆ.

ಈ  ಕುರಿತು ಇಂದು ಮೇಯರ್ ಪುಷ್ಪಲತಾ ಜಗನ್ನಾಥ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ನನಗೆ ತಿಳಿದಿರುವ ಮಟ್ಟಿಗೆ ರಿಲಿಯನ್ಸ್ ಜಿಯೋ ಇನ್ ಫೋಕಾಮ್ ಲಿಮಿಟೆಡ್ ನವರು ವೈಜ್ಞಾನಿಕವಾಗಿಯೇ ಓ.ಎಫ್.ಸಿ ಕೇಬಲ್ ಅಳವಡಿಸುತ್ತಿದ್ದರು. ಆದರೆ ಈ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿದ್ದವು. ಹಾಗಾಗಿ ನಗರಪಾಲಿಕೆ ಆಯುಕ್ತರು ಪರಿಶೀಲನೆ ನಡೆಸಿದ ವೇಳೆ ನಿಯಮ ಉಲ್ಲಂಘನೆ ಮಾಡಿರುವುದು ಅವರ ಗಮನಕ್ಕೆ ಬಂದಿದ್ದು ದಂಡ ವಿಧಿಸಲಾಗಿದೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೇಬಲ್ ಅಳವಡಿಕೆ ಮಾಡುವಂತೆ ಈ ಮೊದಲೇ ಸೂಚಿಸಲಾಗಿತ್ತು. ಪಾದಚಾರಿ ಮಾರ್ಗದಲ್ಲಿ ಕೇಬಲ್ ಅಳವಡಿಸದಂತೆ ಸಲಹೆ ನೀಡಲಾಗಿತ್ತು. ಆದರೂ ಕೆಲವೆಡೆ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಇನ್ನು ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: