ಮೈಸೂರು

ನಿರ್ಭಯಾ ಅತ್ಯಾಚಾರ ಪ್ರಕರಣ ಆರೋಪಿಗಳಿಗೆ ಗಲ್ಲು : ನ್ಯಾಯಾಲಯದ ತೀರ್ಪು ಸ್ವಾಗತಿಸಿ ಸಿಹಿ ಹಂಚಿದ ಪ್ರಜ್ಞಾವಂತ ನಾಗರಿಕ ವೇದಿಕೆ

ಮೈಸೂರು,ಡಿ.18:-  ನಗರದ ಸಿಟಿ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಲ್ಯಾಂಡ್ ಸ್ಟೋನ್ ಬಿಲ್ಡಿಂಗ್ ಸಮೀಪ   ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಇಂದು ನಿರ್ಭಯಾರ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಿಗೆ ನ್ಯಾಯಾಲಯ  ಗಲ್ಲಿಗೇರಿಸಬೇಕೆಂದೇ ತೀರ್ಪು ನೀಡಿದ್ದು,  ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿ ಎಲ್ಲ ಸದಸ್ಯರು ಹಾಗೂ ಸಾರ್ವಜನಿಕರು, ಮಹಿಳೆಯರು ಎಲ್ಲರೂ ಸೇರಿ     ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆಯ ಅಧ್ಯಕ್ಷರಾದ ಕಡಕೊಳ ಜಗದೀಶ್ ಮಾತನಾಡಿ ನ್ಯಾಯಾಲಯದ ತೀರ್ಪನ್ನು ಸಂತಸದಿಂದ ಸ್ವಾಗತಿಸುತ್ತೇವೆ.   ಕಾಮುಕರಿಗೆ  ಯಾವುದೇ ಕಾರಣಕ್ಕೂ ಕ್ಷಮೆ ನೀಡಬಾರದು. ಎಲ್ಲ ಮಹಿಳೆಯರು ನಮ್ಮ ಮನೆಯ ಮಕ್ಕಳಿದ್ದಂತೆ. ಅತ್ಯಾಚಾರಿಗಳಿಗೆ ಯಾವುದೇ ಕಾರಣಕ್ಕೂ ಹಾಗೆಯೇ ಬಿಡಬಾರದು ಅತ್ಯಾಚಾರಿಗಳು ಯಾರೇ ಆದರೂ ಎಂಥ ಪ್ರಬಾವಶಾಲಿಗಳಾದರೂ ಹತ್ತು ದಿನಗಳಲ್ಲೇ ಅವರಿಗೆ ಕಠಿಣ ಶಿಕ್ಷೆ  ನೀಡಬೇಕು. ಹಾಗೂ ಅತ್ಯಾಚಾರ ಆಗದಂತೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಸಂವಿಧಾನದಲ್ಲಿ ಬದಲಾವಣೆಯನ್ನು ತರಬೇಕೆಂದು ಒತ್ತಾಯಿಸಿದರು.

ವಿಕ್ರಂ ಅಯ್ಯಂಗಾರ್   ಮಾತನಾಡಿ ಮಹಿಳೆಯ ಸಬಲೀಕರಣ ಆಗಬೇಕು. ಮಹಿಳೆಗೆ ಸಮಾನತೆ ನೀಡಬೇಕು. ಉದ್ಯೋಗ ನೀಡಬೇಕು ಹೀಗೆ ಚರ್ಚೆಯಾಗುವ ಮಾತುಗಳ ನಡುವೆ ಮೊದಲಿಗೆ ಕುಟುಂಬದ ಹೊರಗಡೆ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು.   ಉದ್ಯೋಗಸ್ಥ ವೈದ್ಯ ಹೆಣ್ಣು ಮಗಳನ್ನು ಅತ್ಯಾಚಾರ ಮಾಡಿ ಸಜೀವವಾಗಿ ದಹನ ಮಾಡಿರುವ ಪ್ರಕರಣ ಇಡೀ ಭಾರತೀಯರು ತಲೆ ತಗ್ಗಿಸುವಂತದ್ದಾಗಿತ್ತು. ದೆಹಲಿಯ ನಿರ್ಭಯಾ ಪ್ರಕರಣದ ನಂತರ ದಕ್ಷಿಣ ಭಾರತದ ಕಡೆ ಇಂತಹ ಘಟನೆ ಜರುಗಿರುವುದು ನಾಗರಿಕ ಸಮಾಜಕ್ಕೆ ಕಪ್ಪುಚುಕ್ಕೆಯಾಗಿದೆ .  ನ್ಯಾಯಾಲಯ  ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು.  ಈ ಬಗ್ಗೆ ಸಂವಿಧಾನ ತಿದ್ದುಪಡಿಯಾದರೂ ಸರಿ ಘೋರ ಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸಾರ್ವಜನಿಕರು ಒತ್ತಾಯಿಸಬೇಕಿದೆ ಎಂದರು.

ಈ ಸಂದರ್ಭ  ಮಧು ಎನ್ ಪೂಜಾರ್,  ಸುಚೀಂದ್ರ, ರಾಕೇಶ್ ,   ರಘುಕಿರಣಗೌಡ,  ರಾಕೇಶ್, ಸಂತೋಷ್, ಸುಮಿತ್ರಾ, ಲಕ್ಷ್ಮಿ, ಪ್ರಮೀಳಾ, ಹಾಗೂ ಶಾಲಾ ಕಾಲೇಜಿನ ಮಕ್ಕಳು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: