ದೇಶಪ್ರಮುಖ ಸುದ್ದಿ

ವಿಶ್ವದಲ್ಲೇ ಹಳೆಯ ವಿಮಾನ-ವಾಹಕ ಐಎನ್ಎಸ್ ವಿರಾಟ್ ಇಂದು ಮುಂಬೈನಲ್ಲಿ ನಿವೃತ್ತಿ

ಮುಂಬೈ : ವಿಶ್ವದಲ್ಲಿ ಪ್ರಸ್ತುತ ಸೇವೆಯಲ್ಲಿರುವ ವಿಮಾನ-ವಾಹಕಗಳಲ್ಲಿ ಅತಿ ಹೆಚ್ಚಿನ ಸಮಯದಿಂದ ಸೇವೆ ಸಲ್ಲಿಸುತ್ತಿರುವ ಐಎನ್‍ಎಸ್‍ ವಿರಾಟ್ ಇಂದು ಸೇವೆಯಿಂದ ವಿಧ್ಯುಕ್ತವಾಗಿ ನಿವೃತ್ತಿಯಾಗಲಿದೆ.

ಮೂರು ದಶಕಗಳ ಕಾಲ ದೇಶದ ನೌಕಾದಳದಲ್ಲಿ ಸೇವೆ ಸಲ್ಲಿಸಿರುವ ಐಎನ್‍ಎಸ್‍ ವಿರಾಟ್‍ಗೆ ಮುಂಬೈಯಲ್ಲಿ ಇಂದು ನಡೆಯುವ ಸಮಾರಂಭದಲ್ಲಿ ವಿಧ್ಯುಕ್ತವಾಗಿ ಬೀಳ್ಕೊಡಲಾಗುವುದು.

ಬೀಳ್ಕೊಡುಗೆ ಸಮಾರಂಭದಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

1987ರಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದ್ದ ಐಎನ್ಎಸ್ ವಿರಾಟ್, ಇದಕ್ಕೂ ಮುನ್ನ ರಾಯಲ್ ಬ್ರಿಟಿಷ್ ನೌಕಾಪಡೆಯಲ್ಲಿ 27 ವರ್ಷಗಳ ಸೇವೆ ಸಲ್ಲಿಸಿತ್ತು. 1943ರಲ್ಲಿ ಎರಡನೇ ವಿಶ್ವಯುದ್ಧದ ಸಂದರ್ಭ ಈ ವಿಮಾನ-ವಾಹಕವನ್ನು ಕಟ್ಟಿ ನಿರ್ಮಿಸಲಾಗಿತ್ತು. ದೇಶಕ್ಕೆ ಬಾಹ್ಯ ಶತ್ರುಗಳು ತಂದಿಟ್ಟ ಹಲವು ಆತಂಕ ನಿವಾರಿಸುವಲ್ಲಿ ಐಎನ್ಎಸ್ ವಿರಾಟ್ ಸಹಕಾರಿಯಾಗಿತ್ತು. ಈ ವಿಮಾನ ವಾಹಕವನ್ನು ಯಾರೂ ಖರೀದಿಸದಿದ್ದರೆ ಇನ್ನು 4 ತಿಂಗಳಿನಲ್ಲಿ ಮುರಿದು ಹಾಕಲಾಗುವುದು ಎಂದು ನೌಕಾಪಡೆ ಮುಖ್ಯಸ್ಥರು ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

Leave a Reply

comments

Related Articles

error: