ಮೈಸೂರು

 ಕೇಕ್ ಪ್ರದರ್ಶನ ಮತ್ತು ಥಾಯ್‍ ಆಹಾರ ಉತ್ಸವಕ್ಕೆ ಚಾಲನೆ  : 12 ದಿನಗಳವರೆಗೆ ನಡೆಯಲಿರುವ ಆಹಾರ ಉತ್ಸವ

ಮೈಸೂರು,ಡಿ.19:- ಮೈಸೂರು ಮೂಲದ ಜನಪ್ರಿಯ ಭೋಜನ ಪ್ರಿಯ ಇಟಾಲಿಯನ್‍ ಕೆಫೆ ಮತ್ತು ಬೇಕ್ ಶಾಪ್‍ ಆಗಿರುವ ಫ್ರೊಸ್ಟಿಂಗ್ ಕೆಫೆ, ವಾರ್ಷಿಕ ಕೇಕ್ ಪ್ರದರ್ಶನ ಮತ್ತು ಥೈಲ್ಯಾಂಡ್ ಸವಿಯನ್ನು ಉಣಬಡಿಸುವ “ಟೇಸ್ಟ್‍ ಆಫ್‍ ಥಾಯ್” ಆಹಾರ ಉತ್ಸವವನ್ನು ಆಯೋಜಿಸಿದೆ. 12 ದಿನಗಳ ಕಾಲ ನಡೆಯಲಿರುವ ಈ ಆಹಾರ ಪ್ರದರ್ಶನಕ್ಕೆ ಇಂದು ಸ್ಟಾರ್‍ ಆಫ್ ಮೈಸೂರು ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ವಿಕ್ರಂ ಮುತ್ತಣ್ಣ, ಫ್ರೋಸ್ಟಿಂಗ್ ಕೆಫೆಯ ಮಾಲೀಕರಾದ ಅಪರ್ಣಾ ರಂಗ ಚಾಲನೆ ನೀಡಿದರು.

ಕ್ರಿಸ್ಮಸ್ ಮತ್ತು ಹೊಸ ವರ್ಷದ ಉತ್ಸಾಹದಲ್ಲಿರುವ ನಗರದ ಜನರಿಗೆ ಹೊಸ ಬಗೆಯ ಸವಿ ರುಚಿಯನ್ನು ಪರಿಚಯಿಸಲು, ಫ್ರೊಸ್ಟಿಂಗ್ ಕೆಫೆ ಈ ಸೊಗಸಾದ ಕೇಕ್‍ಗಳ ಪ್ರದರ್ಶನವನ್ನು ಏರ್ಪಡಿಸಿದೆ. ಇಲ್ಲಿನ ಬಗೆಬಗೆಯ ಕೇಕ್‍ಗಳು ಕಣ್ಣುಗಳಿಗೆ ಮೋಡಿ ಮಾಡುವ ಜೊತೆಗೆ, ರುಚಿ ಮೊಗ್ಗುಗಳಿಗೂ ವಿಶಿಷ್ಟ ಅನುಭವವನ್ನು ನೀಡಲಿವೆ. ಫ್ರೊಸ್ಟಿಂಗ್ ಕೆಫೆಯ ಶೆಫ್‍ಗಳು ತಯಾರಿಸಿದ ಇಲ್ಲಿನ ಪ್ರತಿಯೊಂದು ಕೇಕ್‍ಗಳು ವಿಶೇಷ ಸ್ವಾದದಿಂದ ಕೂಡಿವೆ.

3ನೇ ಆವೃತ್ತಿಯ ಈ ಪ್ರದರ್ಶನದಲ್ಲಿ, ರುಚಿಯಾದ ಭಕ್ಷ್ಯಗಳ, ವಿಶಿಷ್ಟ ವಿನ್ಯಾಸ ಮತ್ತುಆಕಾರದ ಕೇಕ್‍ಗಳ ವ್ಯಾಪಕವಾದ ಮೆನುವನ್ನು ಮೈಸೂರಿಗರ ಮುಂದಿಡುತ್ತಿದೆ. ಫ್ರೊಸ್ಟಿಂಗ್ ಕೆಫೆಯ ಈ ಆಹಾರ ಥಾಯ್‍ ಉತ್ಸವ ಆಹಾರ ಪ್ರಿಯರಿಗೆ ಥೈಲಾಂಡ್‍ ರುಚಿಯನ್ನು ಪರಿಚಯಿಸುತ್ತದೆ. ಮೆನುವಿನಲ್ಲಿ ಥಾಯ್ ಸ್ಪ್ರಿಂಗ್ ರೋಲ್, ತೋಫು ಮತ್ತು ನಿಂಬೆ ಹುಲ್ಲಿನ ತರಕಾರಿ ನೂಡಲ್ಸ್ ಸೂಪ್, ಥಾಯ್‍ಗ್ಲಾಸ್ ನೂಡಲ್ ಸಲಾಡ್, ಕಡಲೆಕಾಯಿ ಬೆಣ್ಣೆ ಸಾಸ್‍ನೊಂದಿಗೆ ಬೇಯಿಸಿದ ತೋಫು, ಥಾಯ್‍ರಾ ಮಾವಿನ ಚಿಕನ್‍ ಕರಿ ಇತ್ಯಾದಿ ಇರುತ್ತದೆ. ಇಂತಹ ಪ್ರದರ್ಶನಗಳು ಶ್ರೀಮಂತ ಥೈಲ್ಯಾಂಡ್ ಸಂಸ್ಕೃತಿಯನ್ನು ನೆನಪಿಸಲು ಮತ್ತು ಹಬ್ಬದ ಸಡಗರವನ್ನು ಒಟ್ಟಿಗೆ ಅನುಭವಿಸಲು ಗ್ರಾಹಕರಿಗೆ ಸಹಾಯ ಮಾಡುತ್ತದೆ. 12 ದಿನಗಳ ಈ ಆಹಾರ ಉತ್ಸವ ವಿವಿಧ ಹಿನ್ನೆಲೆ ಮತ್ತು ವಿವಿಧ ಭಾಗಗಳ ಖಾದ್ಯಪ್ರಿಯರನ್ನು ಒಟ್ಟುಗೂಡಿಸುತ್ತದೆ.

ಈ ವಿನೂತನ ಪ್ರಕದರ್ಶನದಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ   ವಿಕ್ರಂ ಮುತ್ತಣ್ಣ, “ಕ್ರಿಸ್ಮಸ್‍ಕೇಕ್ ಪ್ರದರ್ಶನದ ಮೂಲಕ ಫ್ರೊಸ್ಟಿಂಗ್ ಕೆಫೆ, ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಆಕರ್ಷಕ ಮತ್ತು ಸುವಾಸನೆಯುಳ್ಳ ಕೇಕ್‍ಗಳನ್ನು ಪ್ರದರ್ಶಿಸುತ್ತಿದೆ. ಇದು ರುಚಿಯ ಜೊತೆಗೆ ಕಣ್ಣಿಗೂ ಆಹ್ಲಾದಕರ ನೋಟವನ್ನು ಒದಗಿಸುತ್ತದೆ’ ಎಂದರು.

ಪ್ರದರ್ಶನದ ಬಗ್ಗೆ ಮಾತನಾಡಿದ ಫ್ರೊಸ್ಟಿಂಗ್ ಕೆಫೆಯ ಮಾಲೀಕರಾದ ಅಪರ್ಣಾರಂಗ, “ಫ್ರೊಸ್ಟಿಂಗ್ ಕೆಫೆಯಲ್ಲಿ, ನಾವು ಇಂತಹ ಪ್ರದರ್ಶನಗಳ ಮೂಲಕ ನಮ್ಮ ಖಾದ್ಯಗಳ ಪಟ್ಟಿಯಲ್ಲಿ ಸುಧಾರಿತ ಮತ್ತು ನವೀನ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತೇವೆ. ‘ಟೇಸ್ಟ್‍ ಆಫ್‍ ಥಾಯ್’ಉತ್ಸವದಲ್ಲಿ ಥೈಲ್ಯಾಂಡ್ ಭಕ್ಷ್ಯಗಳೊಂದಿಗೆ, ಗ್ರಾಹಕರಿಗಾಗಿ ಥೈಲ್ಯಾಂಡ್‍ ವಿಷಯಾಧಾರಿತ ಚಟುವಟಿಕೆಗಳೂ ಸಹ ಸೇರಿವೆ”ಎಂದರು. (ಎಸ್.ಎಚ್)

Leave a Reply

comments

Related Articles

error: