ಮೈಸೂರು

ಪುರುಷರ ಕ್ರೀಡಾಕೂಟಕ್ಕೆ ಚಾಲನೆ

ಮಹಾರಾಜ ಕಾಲೇಜು ಹಾಗೂ ದೈಹಿಕ ಶಿಕ್ಷಣ ವಿಭಾಗ ಮೈಸೂರು ವಿವಿಯ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು, ಅಂತರ ವಲಯ ಪುರುಷರ ಕ್ರೀಡಾ‌ಕೂಟ 2016-17ಕ್ಕೆ ಚಾಲನೆ‌ ನೀಡಲಾಯಿತು.

ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ  ಮೈಸೂರು ವಿವಿಯ ಕುಲಸಚಿವರಾದ ಪ್ರೊ. ಆರ್.ರಾಜಣ್ಣ ಸೇರಿದಂತೆ ಗಣ್ಯರೆಲ್ಲರೂ ಸೇರಿ ಬಲೂನ್ ಹಾರಿ‌ಬಿಡುವ ಮೂಲಕ‌ ಕ್ರೀಡಾಕೂಟಕ್ಕೆ‌ ಚಾಲನೆ‌ ದೊರೆಯಿತು.

ಇದೇ ವೇಳೆ 36 ತಂಡಗಳ ನಾಯಕರನ್ನು‌ ಅಭಿನಂದಿಸಿದ ರಾಜಣ್ಣ, ನಂತರ ಕ್ರೀಡೆ ಹಾಗೂ ಕ್ರೀಡಾಕೂಟವನ್ನು ಕುರಿತು ಮಾತನಾಡಿದರು. ಮೈಸೂರು‌ ವಿವಿ ಯಾವಾಗಲೂ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಇಂದು ನಡೆಯುತ್ತಿರುವ ಕ್ರೀಡಾಕೂಟದ ಮೈದಾನ‌ ಕ್ರೀಡೆಗೆಂದೇ‌ ಪ್ರಸಿದ್ಧಿ ಹಾಗೂ ಮೀಸಲು ಪಡೆದಿದೆ. ಮೈಸೂರು ವಿವಿ ಕ್ರೀಡಾ‌ ಪರಂಪರೆ‌ ಉಳಿಸಿಕೊಂಡು‌ ಬಂದಿದೆ. ವಲಯ ಮಟ್ಟದಿಂದ ಹಿಡಿದು, ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಮೈಸೂರು ವಿವಿ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಕ್ರೀಡೆ ಯಾರೊಬ್ಬರ ಸ್ವತ್ತಲ್ಲ. ಅದು ಎಲ್ಲರ ಸ್ವತ್ತು. ಕ್ರೀಡೆ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹುಣಸೂರು ಇನ್ಸ್ಪೆಕ್ಟರ್ ಧರ್ಮೇಂದ್ರ, ಪ್ರೊ.ಸಿ.ಪಿ. ಸುನೀತ, ಡಾ. ಲಿಂಬ್ಯಾನಾಯ್ಕ್, ಮನ್ಸೂರ್ ಅಹ್ಮದ್, ಕೃಷ್ಣ ಕುಮಾರ್ ಸೇರಿದಂತೆ ಕ್ರೀಡಾಪಟುಗಳು ಉಪಸ್ಥಿತರಿದ್ದರು.

Leave a Reply

comments

Related Articles

error: