ಕ್ರೀಡೆಪ್ರಮುಖ ಸುದ್ದಿ

ಬೆಂಗಳೂರು ಟೆಸ್ಟ್ : 276ಕ್ಕೆ ಆಸ್ಟ್ರೇಲಿಯಾ ಆಲೌಟ್

ಬೆಂಗಳೂರು : ಭಾರತ-ಆಸ್ಟ್ರೇಲಿಯಾ ನಡುವೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‍ನಲ್ಲಿ ಆಸ್ಟ್ರೇಲಿಯಾ 276 ರನ್ ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್ ಕಳೆದುಕೊಂಡಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ 276 ರನ್ ಗಳಿಸಿ ಆಲೌಟ್ ಆಗಿದ್ದು 87 ರನ್‍ಗಳ ಮುನ್ನಡೆ ಸಾಧಿಸಿದೆ. ಮೂರನೇ ದಿನದಾಟ ಪ್ರಾರಂಭಿಸಿದ ವಾಡೆ, ಅಜೇಯ 40 ರನ್ ಗಳಿಸಿ ಔಟಾದರೆ ಸ್ಟಾರ್ಕ್ 26 ರನ್ ಗಳಿಸಿ ಔಟಾದರು.

ಇದಕ್ಕೂ ಮೊದಲು ಎರಡನೇ ದಿನ ಆಟ ಪ್ರಾರಂಭಿಸಿದ ಡೇವಿಡ್ ವಾರ್ನರ್ ಮತ್ತು ಮ್ಯಾಟ್ ರೆನ್ ಶಾ ಉತ್ತಮ ಆರಂಭ ತಂದುಕೊಟ್ಟರು. 33 ರನ್ ಗಳಿಸಿದ್ದಾಗ ವಾರ್ನರ್ ಅಶ್ವಿನ್ ಎಸೆತದಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದರು. ಬಳಿಕ ಬಂದ ಸ್ಮಿತ್ 8 ರನ್ ಮಾತ್ರವೇ ಗಳಿಸಿ ಔಟಾದರು.

ಈ ವೇಳೆ ಬಂದ ಮಾರ್ಷ್ ಉತ್ತಮ ಆಟವಾಡಿ 66 ರನ್ ಗಳಿಸಿದರು. ಹ್ಯಾಂಡ್ಸ್ ಕೂಂಬ್ 16 ರನ್ ಮತ್ತು ಮಿಚೆಲ್ ಮಾರ್ಷ್ 0 ರನ್ ಗಳಿಸಲಷ್ಟೇ ಶಕ್ತರಾದರು.

ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ 6, ಅಶ್ವಿನ್ 2, ಇಶಾಂತ್ ಶರ್ಮಾ, ಉಮೇಶ್ ಯಾದವ್ ತಲಾ 1 ವಿಕೆಟ್ ಪಡೆದರು.

Leave a Reply

comments

Related Articles

error: