ಮೈಸೂರು

ಸಂಗೀತದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು : ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

ಮೈಸೂರು,ಡಿ.20:- ಮೈಸೂರಿನ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿದ್ವಾನ್  ಡ್ರಮ್ಮರ್ ಡಾ. ರಾಘವೇಂದ್ರ ಪ್ರಸಾದ್ ಅವರ ” ಪ್ರಸಾದ್ ಸ್ಕೂಲ್ ಆಫ್   ರಿದಮ್ಸ್ 13ನೇ ಅಂಗವಾಗಿ “ಗುರುವೇ ನಮಃ” ವಿವಿಧ ವಾದ್ಯಗಳಿಂದ ಹನುಮಾನ್ ಚಾಲೀಸ ಭಕ್ತಿಪ್ರದಾನ ಸಂಗೀತ ಕಾರ್ಯಕ್ರಮ ನಿನ್ನೆ ಹಮ್ಮಿಕೊಳ್ಳಲಾಗಿತ್ತು.

ವಿಶೇಷವಾಗಿ ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಡ್ರಮ್ಸ್ ವಾದ್ಯ ಬಾರಿಸಿ ಪ್ರೇಕ್ಷಕರ ಮೆಚ್ಚುಗೆ ಚಪ್ಪಾಳೆ ಪಡೆದರು. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು ಟ್ರಿನಿಟಿ ಸ್ಕೂಲ್ ಆಫ್ ಲಂಡನ್ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ  ಪ್ರಮಾಣಪತ್ರ ವಿತರಿಸುವ ಮೂಲಕ ಚಾಲನೆ ನೀಡಿದರು. ನಂತರ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಮಾತನಾಡಿ ಮಗುವಿಗೆ ಸಂಸ್ಕಾರವೆನ್ನುವುದನ್ನು  ಕಲಿಸಲು ಪೋಷಕರು ಮುಂದಾದರೇ ಮಾತ್ರ ಭಾರತದ ಸಂಸ್ಕೃತಿ ಉಳಿಯುತ್ತದೆ. ಸಂಗೀತವೆನ್ನುವುದನ್ನು ಪ್ರತಿಯೊಬ್ಬರೂ ಕಲಿಯಲು ಆನಂದಿಸಲು ಮುಂದಾಗಬೇಕು. ಸಂಗೀತದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ರಕ್ತದೊತ್ತಡ ನಿವಾರಣೆಯಾಗುತ್ತದೆ. ನರನಾಡಿ ಬಲಿಷ್ಠವಾಗಿ ಮೆದುಳು ಸಕ್ರಿಯವಾಗಿ ಕೆಲಸ ಮಾಡುತ್ತದೆ. ನಮ್ಮ ದತ್ತಪೀಠದ ಅಮೇರಿಕಾ ಕಲಿಕಾ ಕೇಂದ್ರದಲ್ಲಿ 85ವರ್ಷದ ಹಿರಿಯ ವೃದ್ಧರೊಬ್ಬರು ಸಂಗೀತ ವಾದ್ಯ ಕಲಿತು ಇಂದು ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ.  ಮೈಸೂರಿನಲ್ಲಿ ಪ್ರತಿಯೊಂದು ಮನೆಯಲ್ಲೂ ಕಲಾವಿದ ,ಕಲಾಪ್ರೋತ್ಸಾಹಕ ಜನಸಿದರೇ ಮಾತ್ರ ಸಾಂಸ್ಕೃತಿಕ ರಾಜಧಾನಿ ಉಳಿಯುತ್ತದೆ. 2020ರ ಫೆಬ್ರವರಿಯಲ್ಲಿ ಹನುಮಾನ್ ಚಾಲೀಸಾ ಬೃಹತ್ ಕಾರ್ಯಕ್ರಮವನ್ನು ಮೈಸೂರಿನ  ವಸ್ತುಪ್ರದರ್ಶನದಲ್ಲಿ ಆಯೋಜಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ   ವಿದ್ವಾನ್ ರಾಘವೇಂದ್ರ ಪ್ರಸಾದ್, ರಂಗಕರ್ಮಿ ಮೈಕ್ ಚಂದ್ರು, ಗಾಯಕ ಕೃಷ್ಣಮೂರ್ತಿ, ಅಜಯ್ ಶಾಸ್ತ್ರಿ, ಸುಚೀಂದ್ರ, ಜಗದೀಶ್, ಚಿಕ್ಕಪ್ಪಾಜಿ, ರಾಕೇಶ್ ಅಯ್ಯರ್ ಹಾಗೂ ವಿದ್ಯಾರ್ಥಿಗಳು ಪೋಷಕರು  ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: