ದೇಶಪ್ರಮುಖ ಸುದ್ದಿ

ಜಮ್ಮು-ಕಾಶ್ಮೀರ, ಗುಜರಾತ್‍ನಲ್ಲಿ ಲಘು ಭೂಕಂಪನ

ನವದೆಹಲಿ : ಜಮ್ಮು ಮತ್ತು ಕಾಶ್ಮೀರದದಲ್ಲಿ ಲಘು ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.8 ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪದ ತೀವ್ರತೆ ಕಡಿಮೆ ಇದ್ದದ್ದರಿಂದ ಯಾವುದೇ ರೀತಿಯ ನಷ್ಟ, ಸಾವು-ನೋವುಗಳ ಸಂಭವಿಸಿರುವ ಬಗ್ಗೆ ವರದಿಗಳಾಗಿಲ್ಲ. ಇಂದು ಬೆಳಿಗ್ಗೆ 8.14ರ ಸುಮಾರಿಗೆ ಭೂಕಂಪನ ಸಂಭವಿಸಿದೆ. ಭೂಕಂಪನದ ಅನುಭವವಾದೊಡನೆ ಜನತೆ ಭಯಭೀತರಾಗಿ ಓಡಾಡಿದರು ಎಂದು ವರದಿಗಳು ತಿಳಿಸಿವೆ.

ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಮುಂಬರುವ ದಿನಗಳಲ್ಲಿ ಇನ್ನಷ್ಟು ಭೂಕಂಪ ಸಂಭವಿಸಬಹುದು ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಹೆಚ್ಚಿನ ಹಾನಿಯಾಗಬಹುದು ಎಂದು ಭೂವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪ ಸಂಭವಿಸಿರುವ ಬೆನ್ನಲ್ಲೇ ಗುಜರಾತ್ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭೂಕಂಪನ ಸಂಭವಿಸಿದೆ ಎಂದು ತಿಳಿದುಬಂದಿದೆ. ರಿಕ್ಟರ್ ಮಾಪಕದಲ್ಲಿ 4.0 ರಷ್ಟು ತೀವ್ರತೆ ದಾಖಲಾಗಿದೆ.

Leave a Reply

comments

Related Articles

error: