ಮೈಸೂರು

ಸದಾಶಿವ ವರದಿ ತಿರಸ್ಕರಿಸಿ ಪ್ರತಿಭಟನೆ

ಸದಾಶಿವ ವರದಿಯನ್ನು ತಿರಸ್ಕರಿಸಿ ಬಂಜಾರ ಸದ್ಗುರು ಸೇವಾಲಾಲ್ ಮಹಾರಾಜ್ ಪ್ರತಿಷ್ಠಾನದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ತುಳಿತಕ್ಕೊಳಗಾಗಿರುವ ಬಂಜಾರ ಸಮುದಾಯಗಳಿಗೆ ಕೊಟ್ಟಿರುವ ಮೀಸಲಾತಿಯಿಂದ ಈಗ ತಾನೇ ಅಂಬೆಗಾಲಿಟ್ಟು ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಮರಣ ಶಾಸನವಾದ ಸದಾಶಿವ ಆಯೋಗವನ್ನು ತಂದು  ತುಂಬಾ ಹೀನಾಯವಾಗಿ ಕಾಣುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದರು.

ಬಂಜಾರ, ಲಂಬಾಣಿ, ಬೋವಿ, ಕೊರವ ಇನ್ನೂ ಹಲವಾರು ಜಾತಿಯವರು ದಯನೀಯ ಸ‍್ಥಿತಿಯಲ್ಲಿ ಬದುಕುತ್ತಿದ್ದಾರೆ. ಗುಡ್ಡಗಾಡು, ಅರಣ್ಯ ಪ್ರದೇಶದಲ್ಲಿ ಮನೆಗಳಿಲ್ಲದೇ, ಶಿಕ್ಷಣವಿಲ್ಲದೇ ಸಮಾಜದ ಕಟ್ಟಕಡೆಯ ಜನರಾಗಿ ಉಳಿದುಬಿಟ್ಟಿದ್ದಾರೆ. ಹೊಟ್ಟೆಪಾಡಿಗಾಗಿ ಹೊರ ರಾಜ್ಯಗಳಲ್ಲಿ  ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಇದರಿಂದ ಇವರು ಮುಖ್ಯ ವಾಹಿನಿಗೆ ಬರಲು ಸಾಧ‍್ಯವಾಗಿಲ್ಲ. ಆದ್ದರಿಂದ ಸದಾಶಿವ ವರದಿಯನ್ನು ತಿರಸ್ಕರಿಸಿ ಪ್ರತಿಭಟಿಸುತ್ತಿದ್ದೇವೆ ಎಂದರು.

ನಂತರ ರಾಜ್ಯ ಸರ್ಕಾರ ಈ ವರದಿಯನ್ನು ರದ್ದುಪಡಿಸಬೇಕೆಂದು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸಮುದಾಯದ ಗೌರವಾಧ‍್ಯಕ್ಷ ಚಂದ್ರಶೇಖರ್, ಅಧ‍್ಯಕ್ಷ ಹೇಮಂತ್ ಕುಮಾರ್, ಕಾರ್ಯದರ್ಶಿ ಕೃಷ್ಣನಾಯಕ್ ಆರ್ ಹಾಗೂ ಬಂಜಾರ ಸಮುದಾಯದ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

comments

Related Articles

error: