ಪ್ರಮುಖ ಸುದ್ದಿ

ಪರಿಶಿಷ್ಟ ಪಂಗಡಕ್ಕೆ ಗೋಂದಳಿ ಜನಾಂಗ ಸೇರ್ಪಡೆ ಕುರಿತು  ಕೇಂದ್ರಕ್ಕೆ ಪತ್ರ : ಸಿಎಂ ಬಿಎಸ್ ವೈ  ಭರವಸೆ

ರಾಜ್ಯ(ಬೆಂಗಳೂರು)ಡಿ.21:-  ಗೋಂದಳಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ಶಿಫಾರಸು ಮಾಡಿ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ   ಬಿ ಎಸ್ ಯಡಿಯೂರಪ್ಪ   ಭರವಸೆ ನೀಡಿದ್ದಾರೆ.

ಶಾಸಕ ಎಂ ಎಲ್ ಲಮಾಣಿ ಅವರ ನೇತೃತ್ವದ ನಿಯೋಗ, ಮುಖ್ಯಮಂತ್ರಿಯವರನ್ನು ಭೇಟಿಯಾಗಿ, ಗೋಂದಳಿ ಸಮುದಾಯದ ಜನ ಅಲೆಮಾರಿಗಳಾಗಿದ್ದು, ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು, ಕೇಂದ್ರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.

ಗೋಂದಳಿ ಸಮುದಾಯಕ್ಕೆ ಯಾವುದೇ ಶಾಸನ ಸಭೆಯಲ್ಲಿ, ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಇಲ್ಲ. ಆದ್ದರಿಂದ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವಂತೆಯೂ ನಿಯೋಗದ ಪ್ರತಿನಿಧಿಗಳು ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸಿ, ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: