ಮೈಸೂರು

 ಮಂಡಿ ಪೊಲೀಸರ ಕಾರ್ಯಾಚರಣೆ ;  ಕುಖ್ಯಾತ ಸುಲಿಗೆಕೋರರ ಬಂಧನ ; 5,68,750  ಮೌಲ್ಯದ ಚಿನ್ನಾಭರಣ ವಶ

ಮೈಸೂರು,ಡಿ.23:- ಮೈಸೂರು ನಗರ ಮಂಡಿ ಪೊಲೀಸರು ಮಾಹಿತಿ ಮೇರೆಗೆ   12-12-2019 ರಂದು ಮಧ್ಯ ರಾತ್ರಿ ಹೈವೇ ಸರ್ಕಲ್ ನಿಂದ ಜಾವಾ ಫ್ಯಾಕ್ಟರಿ ಕಡೆಗೆ ಹೋಗುವ ರಸ್ತೆಯಲ್ಲಿರುವ ಹಂದಿ ಹಳ್ಳದ ಸರ್ಕಲ್ ಬಳಿ ಕಾರ್ಯಾಚರಣೆ ನಡೆಸಿ, ಸುಲಿಗೆ ಮಾಡಲು  ಹೊಂಚು ಹಾಕುತ್ತಿದ್ದ  ಆರು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮಂಜುನಾಥ @ ಕರೀಮ ಬಿನ್ ಶ್ರೀನಿವಾಸ, (23), ಮಹದೇಶ್ವರ ಬಡಾವಣೆ, ಮೈಸೂರು, ಮಂಜು ಬಿನ್ ನಾಗರಾಜು, (50), ಕುಂಬಾರಕೊಪ್ಪಲು ಮೈಸೂರು, ಶ್ರೀಧರ ಬಿನ್ ಲೇಟ್ ಶ್ರೀನಿವಾಸ, (35 ), ಕೆ.ಆರ್ ಮೊಹಲ್ಲಾ, ಮೈಸೂರು, ಇಮ್ರಾನ್ ಪಾಷ ಬಿನ್ ಮೆಹಬೂಬ್ ಖಾನ್, (38), ಬನ್ನೂರು ಟೌನ್, ಮೈಸೂರು ಜಿಲ್ಲೆ, ನಾರಾಯಣ ಬಿನ್ ಲೇಟ್ ರಾಮೇಗೌಡ, (45), ಮೇಟಗಳ್ಳಿ, ಮೈಸೂರು, ಪುಟ್ಟರಾಜು ಬಿನ್ ಕರಿಗೌಡ, (45 ) ಸರಸ್ವತಿಪುರಂ ಮೈಸೂರು

ಎಂದು ಗುರುತಿಸಲಾಗಿದ್ದು, ಇವರನ್ನು ವಶಕ್ಕೆ ಪಡೆದುಕೊಂಡು  ಈ ಸಂಬಂಧ ಪ್ರಕರಣ ದಾಖಲಿಸಿ ಕೂಲಂಕುಷವಾಗಿ ವಿಚಾರಣೆಗೊಳಪಡಿಸಲಾಗಿ, ಇವರು ಬನ್ನೂರು ಮತ್ತು ಮೈಸೂರು ಸೌತ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸುಲಿಗೆ ಮಾಡಿದ್ದು, ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಬೈಕನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದರು. ಆರೋಪಿಗಳನ್ನು   ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇವರಲ್ಲಿ  ಮಂಜುನಾಥ , ಇಮ್ರಾನ್ ಪಾಷ, ಪುಟ್ಟರಾಜು ಅವರುಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು,   ಪ್ರಕರಣಗಳಿಗೆ ಸಂಬಂಧಪಟ್ಟಂತೆ   5,68,750ರೂ. ಮೌಲ್ಯದ 117 ಗ್ರಾಂ ಚಿನ್ನಾಭರಣ, ಒಂದು ಬಜಾಜ್ ಪಲ್ಸರ್ ಬೈಕ್ ಮತ್ತು ಕೃತ್ಯಕ್ಕೆ ಬಳಸಿದ್ದ ಮಾರುತಿ ಓಮ್ನಿ ವ್ಯಾನನ್ನು ವಶಪಡಿಸಿಕೊಂಡಿದ್ದಾರೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ.(ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ)     ಬಿ.ಟಿ. ಕವಿತ, ನರಸಿಂಹರಾಜ ವಿಭಾಗದ ಎ.ಸಿ.ಪಿ  ಶಿವಶಂಕರ್.ಎಂ    ನೇತೃತ್ವದಲ್ಲಿ ಮಂಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಅರುಣ್.ಎಲ್, ಪ್ರೊ.ಪಿ.ಎಸ್.ಐ. ಶಿವಕುಮಾರ್, ಶಬರೀಶ್, ಎ.ಎಸ್.ಐ. ಗುರುಸ್ವಾಮಿ, ಸಿಬ್ಬಂದಿಯವರುಗಳಾದ ಜಯಪಾಲ, ರಾಜೇಂದ್ರ ಜಿ.ಸಿ, ಎಸ್.ಜಯಕುಮಾರ್, ಚಂದ್ರಶೇಖರ್, ಎಲಿಯಾಸ್. ರವಿಗೌಡ, ಹನುಮಂತ ಕಲ್ಲೇದ ಮತ್ತು ಶಂಕರ ಟಿ ಬಂಡಿವಡ್ಡರ್  ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: