
ಮೈಸೂರು
ಪತಿ ನೀಡುತ್ತಿದ್ದ ಹಿಂಸೆ ತಾಳಲಾರದೇ ಗೃಹಿಣಿ ನೇಣು ಬಿಗಿದು ಆತ್ಮಹತ್ಯೆ
ಮೈಸೂರು,ಡಿ.23:-ಪತಿ ನೀಡುತ್ತಿದ್ದ ಹಿಂಸೆ ತಾಳಲಾರದೇ ಗೃಹಿಣಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ರಾಘವೇಂದ್ರ ನಗರದಲ್ಲಿ ನಡೆದಿದೆ.
ಮೃತರನ್ನು ರಾಘವೇಂದ್ರ ನಗರ ನಿವಾಸಿ ಶಿವರಾಂ ಎಂಬವರ ಪತ್ನಿ ಹೇಮಾವತಿ(36)ಎಂದು ಹೇಳಲಾಗಿದ್ದು, ಶ್ರೀರಂಗಪಟ್ಟಣದ ಬಾಬುರಾಯನ ಕೊಪ್ಪಲು ಚಿಕ್ಕತಮ್ಮೇಗೌಡರ ಪುತ್ರಿ ಹೇಮಾವತಿಯನ್ನು ಶಿವರಾಂ ಎಂಬವರಿಗೆ ಹತ್ತು ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಇವರಿಗೆ 9ವರ್ಷದ ಮಗಳಿದ್ದಾಳೆ. ಪತಿ ಶಿವರಾಂ ನಿತ್ಯ ಹಿಂಸೆ ನೀಡುತ್ತಿದ್ದ ಎನ್ನಲಾಗಿದ್ದು, ಡೊ.20ರಂದು ಸಂಜೆ 7ಗಂಟೆಗೆ ತವರಿಗೆ ಕರೆ ಮಾಡಿ ಪತಿ ಹಿಂಸೆ ನೀಡುತ್ತಿರುವುದರ ಕುರಿತು ತಿಳಿಸಿದ್ದರು. ಅದಾದ ಅರ್ಧ ಗಂಟೆಯಬಳಿಕ ಅಳಿಯ ಶಿವರಾಂ ತನ್ನ ಸೊಸೆ ಪುನೀತಾ ಕುಮಾರಿಗೆ ಕರೆ ಮಾಡಿ ಹೇಮಾವತಿ ನೇಣು ಹಾಕಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಮೃತಪಟ್ಟಿದ್ದಾರೆಂದು ತಿಳಿಸಿದ್ದರೆಮದು ತಿಳಿಸಿದ್ದ ಎಂದು ಹೇಮಾವತಿ ತಂದೆ ಚಿಕ್ಕತಮ್ಮೇಗೌಡ ನಜರ್ ಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಿವರಾಂ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮೂಂದಿನ ಕ್ರಮ ಕೈಗೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)