ಮನರಂಜನೆ

ಫಿಲ್ಮ್ ಫೇರ್ ಸೌತ್ ಪ್ರಶಸ್ತಿ: ಯಶ್, ಮಾನ್ವಿತಾ ಕಾಮತ್ ಅತ್ಯುತ್ತಮ ನಟ, ನಟಿ

ಬೆಂಗಳೂರು,ಡಿ.23-ರಾಕಿಂಗ್ ಸ್ಟಾರ್ ಯಶ್ `ಕೆಜಿಎಫ್’ ಸಿನಿಮಾದ ನಟನೆಗೆ ಅತ್ಯುತ್ತಮ ನಟ, ಮಾನ್ವಿತಾ ಕಾಮತ್ ಟಗರು ಸಿನಿಮಾದ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ನಿನ್ನೆ ಚೆನ್ನೈನಲ್ಲಿ ನಡೆದ 66ನೇ ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಯಶ್, ಮಾನ್ವಿತಾ ಕಾಮತ್ ಅತ್ಯುತ್ತಮ ನಟ, ನಟಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಸಿನಿಮಾ ಅತ್ಯುತ್ತಮ ಸಿನಿಮಾವಾಗಿ ಹೊರಹೊಮ್ಮಿದೆ. ‘ನಾತಿಚರಾಮಿ’ ಸಿನಿಮಾ 4 ಪ್ರಶಸ್ತಿಗಳನ್ನು, ‘ಕೆಜಿಎಫ್’ ಹಾಗೂ ‘ಟಗರು’ ಸಿನಿಮಾ 2 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಅತ್ಯುತ್ತಮ ಸಿನಿಮಾ: ಕೆಜಿಎಫ್, ಅತ್ಯುತ್ತಮ ನಟ: ಯಶ್ (ಕೆಜಿಎಫ್), ಅತ್ಯುತ್ತಮ ನಟಿ: ಮಾನ್ವಿತಾ ಕಾಮತ್ (ಟಗರು)

ಅತ್ಯುತ್ತಮ ನಟ, ನಟಿ (ಕ್ರಿಟಿಕ್ಸ್): ಅತ್ಯುತ್ತಮ ನಿರ್ದೇಶಕ ಮಂಸೋರೆ (ನಾತಿಚರಾಮಿ), ಅತ್ಯುತ್ತಮ ನಟ (ಕ್ರಿಟಿಕ್ಸ್): ಸತೀಶ್ ನೀನಾಸಂ (ಅಯೋಗ್ಯ), ಅತ್ಯುತ್ತಮ ನಟಿ (ಕ್ರಿಟಿಕ್ಸ್): ಶ್ರುತಿ ಹರಿಹರನ್ (ನಾತಿಚರಾಮಿ).

ಅತ್ಯುತ್ತಮ ಪೋಷಕ ನಟ, ನಟಿ: ಅತ್ಯುತ್ತಮ ಪೋಷಕ ನಟ: ಧನಂಜಯ್ (ಟಗರು), ಅತ್ಯುತ್ತಮ ಪೋಷಕ ನಟಿ: ಶರಣ್ಯ (ನಾತಿಚರಾಮಿ), ಅತ್ಯುತ್ತಮ ಗಾಯಕ: ಸಂಚಿತ್ ಹೆಗ್ಡೆ- ಶಾಕುಂತ್ಲೇ ಸಿಕ್ಕಳು (ನಡುವೆ ಅಂತರವಿರಲಿ).

ಅತ್ಯುತ್ತಮ ಮ್ಯೂಸಿಕ್ ಆಲ್ಬಂ ಅತ್ಯುತ್ತಮ ಗಾಯಕಿ: ಬಿಂದುಮಾಲಿನಿ- ಭಾವಲೋಕದ (ನಾತಿಚರಾಮಿ), ಅತ್ಯುತ್ತಮ ಸಾಹಿತ್ಯ: ಹೆಚ್.ಎಸ್.ವೆಂಕಟೇಶಮೂರ್ತಿ- ಸಕ್ಕರೆ ಪಾಕದಲ್ಲಿ (ಹಸಿರು ರಿಬ್ಬನ್), ಅತ್ಯುತ್ತಮ ಮ್ಯೂಸಿಕ್ ಆಲ್ಬಂ: ವಾಸುಕಿ ವೈಭವ್ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು).

ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಯ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. (ಎಂ.ಎನ್)

Leave a Reply

comments

Related Articles

error: