ನಮ್ಮೂರುಮೈಸೂರು

ಕಾಡ್ಗಿಚ್ಚಿನ ಎಫೆಕ್ಟ್ ಶುರು : ನಾಡಿನತ್ತ ನಡೆದುಬರುತ್ತಿರುವ ಪ್ರಾಣಿಗಳು !

ಬಂಡಿಪುರ ಈಗಾಗಲೇ‌ ಕಾಡ್ಗಿಚ್ಚಿನಿಂದ ಸುಟ್ಟು ಕರಕಲಾಗಿ, ಪ್ರಾಣಿ ಪಕ್ಷಿಗಳು ಆಹುತಿಯಾಗಿವೆ. ಇದರ ಪರಿಣಾಮ ಕಾಡನ್ನೇ ಆಶ್ರಯಿಸಿ ಬದುಕುವ ಪ್ರಾಣಿಗಳು ನಾಡಿನತ್ತ ಹೆಜ್ಜೆ ಹಾಕುತ್ತಿದ್ದು, ಕಾಡಂಚಿನ ಗ್ರಾಮಸ್ಥರಲ್ಲಿ ಆತಂಕ ತಂದೊಡ್ಡಿದೆ.

ಕಾಡುಸುಟ್ಟು ಕರಕಲಾದ ಮೇಲೆ ಪ್ರಾಣಿಗಳು ಹೇಗೆ ಅಲ್ಲಿರಲು ಸಾಧ್ಯ? ಹೀಗಾಗಿ ಪ್ರಾಣಿಗಳು ಕಾಡು ಬಿಟ್ಟು ನಾಡಿನತ್ತ ಹೆಜ್ಜೆ ಹಾಕುತ್ತಿವೆ. ಕಾಡ್ಗಿಚ್ಚಿಗೆ ಬೆದರಿದ ಆನೆಗಳ ಹಿಂಡು ನಾಡಿನ ಕಡೆಗೆ ಲಗ್ಗೆ ಇಟ್ಟಿವೆ. ಹೆಚ್.ಡಿ.ಕೋಟೆ ತಾಲೂಕಿನ ಎನ್.ಬೆಳ್ತೂರು ಅರಣ್ಯ ವಾಪ್ತಿಯ ಕಲಸ್ತೂರು ಗ್ರಾಮದ ಬಳಿ ಕಂಡ ಆನೆಯ ಹಿಂಡು ಇಂಥದ್ದೊಂದು ಆತಂಕಕ್ಕೆ ಕಾರಣವಾಗಿದೆ.

ರಸ್ತೆಯನ್ನ ದಾಟಿ ಗ್ರಾಮಕ್ಕೆ ಬಂದ ಗಜಪಡೆ…

ಆನೆಗಳ ಹಿಂಡು ಕಲಸ್ತೂರು ಗ್ರಾಮಕ್ಕೆ ಬಂದಿದ್ದು, ಗ್ರಾಮಸ್ಥರು ಭಯಬೀತಗೊಂಡಿದ್ದಾರೆ. ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡ್ಗಿಚ್ಚು ಮತ್ತು ಬಿಸಿಲ ಝಳದಿಂದ ಕಾಡು ಪ್ರಾಣಿಗಳಿಗೆ ಆಹಾರ ಸಿಗದೆ ಕಂಗಲಾಗಿವೆ. ಮತ್ತೊಂದೆಡೆ ಕಾಡ್ಗಿಚ್ಚಿನಿಂದ ಹೆದರಿದ ಆನೆಗಳ ಹಿಂಡು ಗ್ರಾಮಗಳತ್ತ ಬರುತ್ತಿವೆ.

ಹೆಚ್.ಡಿ.ಕೋಟೆ ತಾಲೂಕಿನ ಎನ್.ಬೆಳ್ತೂರು ಅರಣ್ಯ ವ್ಯಾಪ್ತಿಯ ರಸ್ತೆಯನ್ನು ದಾಟಿ ಗಜಪಡೆ ಕಲಸ್ತೂರು ಗ್ರಾಮದ ಕಡೆ ಬಂದಿವೆ. ಇದರಿಂದ ಆತಂಕಗೊಂಡಿರುವ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾಗಿರುವ ಅರಣ್ಯ ಸಿಬ್ಬಂದಿ, ಆನೆಗಳನ್ನು ಕಾಡಿಗೆ ಓಡಿಸಲು ಪ್ರಯತ್ನ ನಡೆಸಿದ್ದಾರೆ.

  • ಸುರೇಶ್ ಎನ್. ಮೈಸೂರು

Leave a Reply

comments

Related Articles

error: