ಮೈಸೂರು

52ರ ಹರೆಯದಲ್ಲಿ ಚಾಮುಂಡಿಬೆಟ್ಟದ ಪಾದದ ಬಳಿಯಿಂದ ಮೂರು ಬಾರಿ ಹತ್ತಿಳಿದು ಸಾಹಸ ಪ್ರದರ್ಶಿಸಲಿರುವ ಕೇಶವ್

ಮೈಸೂರು,ಡಿ.24:- ಮೈಸೂರು ಕೆಆರ್ ಮೊಹಲ್ಲಾ ನಿವಾಸಿಯಾದ  52ರ ಹರೆಯದ  ವರ್ಷದ ಕಡ್ಲೆ ಪುರಿ ವ್ಯಾಪಾರ ಮಾಡುವ ಎಂ ಕೇಶವ್  ಅವರು ಕಡು ಬಡತನದಲ್ಲೂ ಸುಮಾರು 24 ವರ್ಷಗಳಿಂದ ಹಲವಾರು ಸಾಹಸಮಯ ಪ್ರವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ.

22 ವರ್ಷಗಳ ಹಿಂದೆಯೇ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳನ್ನು 58 ನಿಮಿಷದಲ್ಲಿ 3 ಬಾರಿ ಹತ್ತಿ ಇಳಿದು ದಾಖಲೆ ಮಾಡಿದ್ದರು. ಇದು ಅಂದು ದಿನಪತ್ರಿಕೆಯಲ್ಲಿ ದಾಖಲಾಗಿತ್ತು . ಅನಕ್ಷರಸ್ಥ ರಾದ ಇವರು ಎಲ್ಲಿಯೂ ದಾಖಲು ಮಾಡಿಲ್ಲ. ಡಾ. ರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿಯಾದ ಇವರು ವೀರಪ್ಪನ್ ಅಪಹರಣಕ್ಕೊಳಗಾದಾಗ , ಅವರು ಶೀಘ್ರವಾಗಿ ಮರಳಿ ಬರಲಿ ಎಂದು ಬೆನ್ನಿಗೆ ಹುಕ್ಕುಗಳನ್ನು ಹಾಕಿ ಟಾ ಟಾ ಸುಮೋವನ್ನು ಬೆಟ್ಟದ ಪಾದದಿಂದ ಕೆ ಆರ್ ಸರ್ಕಲ್ ವರೆಗೂ ಎಳೆದು ಸಾಹಸ ಪ್ರದರ್ಶಿಸಿದ್ದರು.

2002 ರಲ್ಲಿ ಮೈಸೂರಿನ ಕೆಆರ್ ಸರ್ಕಲ್ ನಿಂದ ಬೆಂಗಳೂರಿನಲ್ಲಿರುವ ಡಾ. ರಾಜ್ ಅವರ ನಿವಾಸದ ವರೆಗೂ ಸೈಕಲ್ ಸವಾರಿ ಮಾಡಿ ಅಭಿಮಾನ ವ್ಯಕ್ತಪಡಿಸಿದ್ದರು. ಮೈಸೂರಿನ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದಾಗ ಡಾ. ರಾಜ್ ಕುಮಾರ್ ಅವರು ಕೇಶವ್ ಅವರನ್ನು ಭೇಟಿಯಾಗಿ ಶ್ಲಾಘಿಸಿದ್ದರು. ಚಾಮುಂಡಿ ಬೆಟ್ಟಕ್ಕೆ ಒಟ್ಟು 30 ಕ್ಕೂ ಹೆಚ್ಚು ಬಾರಿ ಹತ್ತಿ ಇಳಿದಿರುವ ಕೇಶವ್ ಅವರು , ಈಗಲೂ ಕಡಲೆ ಪುರಿ ವ್ಯಾಪಾರ ಮಾಡಿಯೇ ಜೀವನ ಸಾಗಿಸುತ್ತಿದ್ದಾರೆ.  ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದಾರೆ , ಮಗ ಆಟೋ ಓಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ  , 52ವರ್ಷದ ಕೇಶವ್ ಅವರಿಗೆ ಬಲಗಣ್ಣು ಸಂಪೂರ್ಣ ಕಾಣದಂತಾಗಿದ್ದು , ಅವರಿಗೆ ಈವಾಗ ಸಹಾಯ ಹಸ್ತ ಬೇಕಾಗಿದೆ. ಇಂತಹ ಅನಾರೋಗ್ಯ ಪರಿಸ್ಥಿತಿಯಲ್ಲಿಯೂ ಪುನಃ ಚಾಮುಂಡಿ ಬೆಟ್ಟ ಹತ್ತುವ ಸಾಹಸಕ್ಕೆ ಕೈ ಹಾಕಿದ್ದಾರೆ , 27/12/2019ರಂದು 10.30ಕ್ಕೆ  ಚಾಮುಂಡಿ ಬೆಟ್ಟದ ಪಾದದ ಬಳಿಯಿಂದ  ಚಾಮುಂಡಿ ಬೆಟ್ಟವನ್ನು ಮೂರು ಬಾರಿ ಹತ್ತಲಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: