ಮನರಂಜನೆಮೈಸೂರು

ಮೈಸೂರಲ್ಲಿ ಶ್ರೀನಿವಾಸ ಕಲ್ಯಾಣ…

ಅರೆ ಮೈಸೂರಲ್ಲಿ ಇದೆನಪ್ಪಾ ಶ್ರೀನಿವಾಸ ಕಲ್ಯಾಣ ಅಂತ ಶಾಕ್ ಆಗ್ಬೇಡಿ. ಇದು ಶ್ರೀನಿವಾಸ ಕಲ್ಯಾಣ ಚಿತ್ರತಂಡದ ಮೈಸೂರು ಸವಾರಿ. ಹೌದು, ಮೈಸೂರಿನಲ್ಲಿ ಎರಡು ದಿನಗಳಿಂದ ಶ್ರೀನಿವಾಸ ಕಲ್ಯಾಣ ಚಿತ್ರತಂಡ ಸವಾರಿ ಮಾಡ್ತಿದೆ. ಪ್ರಮುಖ ಕಾಲೇಜುಗಳಿಗೆ ಭೇಟಿ ನೀಡುತ್ತಿರುವ ಚಿತ್ರತಂಡ ತಮ್ಮ ಚಿತ್ರದ ಬಗ್ಗೆ ಪ್ರಮೋಷನ್ ಮಾಡುತ್ತಿದೆ. ಈಗಾಗಲೇ ಚಿತ್ರ ನೋಡಿರುವ ವಿದ್ಯಾರ್ಥಿಗಳು ಚಿತ್ರದ ನಾಯಕ – ಇಬ್ಬರು ನಾಯಕಿಯರು ಕಾಲೇಜಿಗೆ ಬಂದೋಡನೆ ಮುಗಿ ಬಿದ್ದು ಸೆಲ್ಫಿ ಪಡೆಯುತ್ತಿದ್ದಾರೆ. ಭರ್ಜರಿಯಾಗಿ ಚಿತ್ರ ಮುನ್ನುಗುತ್ತಿರುವ ಹಿನ್ನಲೆಯಲ್ಲಿ ಚಿತ್ರತಂಡ ಮೈಸೂರು ಪ್ರವಾಸ ಕೈಗೊಂಡಿದೆ. ಇನ್ನೂ ಇದೇ ಮೊದಲ ಬಾರಿಗೆ ಸೀರಿಯಲ್ ನಟಿ ಲಕ್ಷ್ಮಿಬಾರಮ್ಮ ಚಿನ್ನು ಖ್ಯಾತಿಯ (ಕವಿತಾ) ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮಾತ್ರವಲ್ಲ, ನಟ ನಿರ್ದೇಶಕ ಶ್ರೀನಿವಾಸ್ ಮತ್ತು ನಿಖಿಲಾ ಸುಮನ್, ಸುಜಯ್ ಶಾಸ್ತ್ರಿ, ಈ ವೇಳೆ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಜೊತೆ ಸಂವಾದ..

ಕಾಲೇಜು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಚಿತ್ರ ತಂಡ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿತು. ಈ ವೇಳೆ ವಿದ್ಯಾರ್ಥಿಗಳಿಂದ ಭಿನ್ನ-ವಿಭಿನ್ನ ಪ್ರಶ್ನೆಗಳಿಗೆ ನಗುತ್ತಲೇ, ಹಾಸ್ಯಮಯವಾಗಿ ಚಿತ್ರತಂಡ ಉತ್ತರಿಸುತ್ತಾ ಹೋಯಿತು. ನಂತರ ಮೈಸೂರಿನ ಖಾಸಗಿ ಮಾಲ್‍ನಲ್ಲಿ ಆಯೋಜಿಸಲಾಗಿದ್ದ ಪ್ರದರ್ಶನಕ್ಕೆ ಚಿತ್ರ ತಂಡ ಹೋಯಿತು. ಈ ವೇಳೆಯೂ ‌ಚಿತ್ರ ನೋಡಲು ಬಂದ ಸಿನಿರಸಿಕರು ಚಿತ್ರ ತಂಡವನ್ನ ನೋಡಿ ಸಂತಸಪಟ್ಟರು.

ರಂಗಾಯಣಕ್ಕೆ ಭೇಟಿ…

ರಂಗಾಯಣಕ್ಕೆ ಭೇಟಿ‌ ನೀಡಿದ ಚಿತ್ರ ತಂಡ ಕಲಾವಿದರ ಜೊತೆ ಬೆರೆತು ಮಾತುಕತೆ ನಡೆಸಿತು. ಈ ವೇಳೆ ಚಿತ್ರ ನೋಡಿದ್ದ ಹಿರಿಯ ರಂಗಭೂಮಿ ‌ಕಲಾವಿದ ಮೈಮ್ ರಮೇಶ್ ಮಾತನಾಡಿ, ಶ್ರೀನಿವಾಸ ಕಲ್ಯಾಣ ಅಧ್ಬುತವಾದ ಚಿತ್ರ. ನಾನು ಸಿನಿಮಾಗಳನ್ನೆ ನೋಡೋದಿಲ್ಲ‌. ಈ ಚಿತ್ರ ನೋಡಿದ ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ. ಪ್ರಯೋಗಾತ್ಮಕವಾದ ಚಿತ್ರ ಇದಾಗಿದ್ದು, ಇಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಈ ಚಿತ್ರ ಪಾಠವಾಗಲಿದೆ ಎಂದರು.

ಇನ್ನು ಮಂಡ್ಯ ರಮೇಶ್ ಮಾತನಾಡಿ, ಚಿತ್ರದ ಚಿಂತನೆ, ರಂಜನೆ ಹಾಗೂ ತಾರ್ಕಿಕ ಅಂತ್ಯ ಮತ್ತು ಬದುಕಿನ ಆಧ್ಯಾತ್ಮ ನೋಡುಗರನ್ನ ಸೆಳೆಯುತ್ತದೆ. ಚಿತ್ರದಲ್ಲಿನ ಸೂಕ್ಷ್ಮ ಅಂಶಗಳು ಕಥೆ ಹೆಣೆಯುವಿಕೆ ನಿರ್ದೇಶಕರಿಂದ ಮಧುರವಾಗಿ ಮೂಡಿ ಬಂದಿದೆ. ಅದಕ್ಕೆ ನಾನೂ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಾಸ್ಯದಲ್ಲಿ ಇಂದಿನ ಯುವ ಪೀಳಿಗೆಯ ತಲ್ಲಣಗಳನ್ನ ಚಿತ್ರದಲ್ಲಿ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಮತ್ತು ಚಿತ್ರದಲ್ಲಿ ಕಲಾವಿದರ ಆಯ್ಕೆಯಿಂದಲೇ ಚಿತ್ರ ತಂಡ ಚಿತ್ರ ಬಿಡುಗಡೆಯ ಮುನ್ನವೇ ಗೆದ್ದಿದೆ. ಹೈಸ್ಕೂಲ್ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿಯೇ ಈ‌ ಚಿತ್ರ ಮಾಡಿದ್ದಾರೆನ್ನಲಾಗಿದ್ದು, ಈ ಚಿತ್ರವನ್ನ ಎಲ್ಲರೂ ನೋಡಿ‌ ಎಂದರು.

ಶ್ರೀನಿವಾಸನ ಮೈಸೂರಿನ ಸಿಟಿ ರೌಂಡು ಫಲಪ್ರದವಾಗಿತ್ತು. ಚಿತ್ರವು ಯುವ ಪೀಳೆಗೆಯನ್ನು ಸೆಳೆಯುತ್ತಿದ್ದು, ಮುಂದೆ ಯಾವೆಲ್ಲ‌ ರೆಕಾರ್ಡ್ ಬ್ರೇಕ್ ಮಾಡಲಿದೆ ಎಂದು ಕಾದು ನೋಡಬೇಕಿದೆ.

  • ಸುರೇಶ್ ಎನ್.

Leave a Reply

comments

Related Articles

error: