ಕರ್ನಾಟಕಮೈಸೂರು

ಕಾವೇರಿ ನೀರು ವಿವಾದ: ಸೆ.20ರ ಆದೇಶ ಪರಿಶೀಲನೆ ಕೋರಿ ಸುಪ್ರೀಂಗೆ ಅರ್ಜಿ

ತಮಿಳುನಾಡಿಗೆ ಪ್ರತಿದಿನ 7 ದಿನಗಳ ಕಾಲ 6,000 ಕ್ಯೂಸೆಕ್ ನೀರು ಬಿಡುವಂತೆ ಸೆ.20ರಂದು ನೀಡಿದ ತೀರ್ಪಿನಲ್ಲಿ ಮಾರ್ಪಾಡು ಮಾಡಬೇಕೆಂದು ಕೋರಿ ಕರ್ನಾಟಕ ಸರಕಾರ ಸುಪ್ರೀಂ ಕೋರ್ಟ್‍ಗೆ ಮನವಿ ಸಲ್ಲಿಸಿದೆ.

ಸೆ.27ರವರೆಗೆ ಪ್ರತಿ ದಿನ ತಮಿಳುನಾಡಿಗೆ 6,000 ಕ್ಯೂಸೆಕ್ ನೀರು ಬಿಡುವಂತೆ ಸೆ.20ರಂದು ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಪೀಠ ಕರ್ನಾಟಕಕ್ಕೆ ಆದೇಶಿಸಿತ್ತು. ರಾಜ್ಯದ ಜನರಿಗೆ ಕುಡಿಯಲು ನೀರಿಲ್ಲದಿರುವುದರಿಂದ ಆದೇಶವನ್ನು ಮರುಪರಿಶೀಲಿಸುವಂತೆ ಕರ್ನಾಟಕ ಸುಪ್ರೀಂಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿ ವಿಚಾರಣೆಯು ಮಂಗಳವಾರ ನಡೆಯಲಿದೆ.

ಕಾವೇರಿ ಕೊಳ್ಳದ ಭಾಗದ ಜನರಿಗೆ ಕುಡಿಯಲು ನೀರಿಲ್ಲ. ಅಲ್ಲದೆ, ಈ ಭಾಗದಲ್ಲಿ ಮಳೆ ಕೂಡ ಆಗಿಲ್ಲ. ಹಾಗಾಗಿ ತಮಿಳುನಾಡಿನ ಬೆಳೆಗೆ ನೀರು ಹರಿಸಲ್ಲ ಎಂದು ವಿಧಾನಮಂಡಲದಲ್ಲಿ ಸರ್ವಾನುತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿದ ಅರ್ಜಿಯ ಜತೆ ನಿರ್ಣಯ ಪತ್ರವನ್ನು ಸಲ್ಲಿಸಲಾಗಿದೆ.

Leave a Reply

comments

Tags

Related Articles

error: