ಮೈಸೂರು

ಮಕ್ಕಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕರೆತಂದಿದ್ದ ಶಿಕ್ಷಕ ರಸ್ತೆ ದಾಟುವಾಗ ಕಾರು ಡಿಕ್ಕಿ ; ಶಿಕ್ಷಕ ಸಾವು

ಮೈಸೂರು,ಡಿ.25:- ಮಕ್ಕಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕರೆತಂದಿದ್ದ ಶಿಕ್ಷಕರೋರ್ವರು ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ ಘಟನೆ ಪಿರಿಯಾಪಟ್ಟಣ ಬಳಿ ನಡೆದಿದೆ.

ಮೃತರನ್ನು ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಶಾಲೆಯೊಂದರ ಶಿಕ್ಷಕ ಈರಣ್ಣ(55) ಎಂದು ಹೇಳಲಾಗಿದೆ. ಮಕ್ಕಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕರೆತಂದಿದ್ದ ಅವರು ಮಂಗಳೂರು, ಮಡಿಕೇರಿ ಪ್ರವಾಸ ಮುಗಿಸಿ ಮೈಸೂರಿನಲ್ಲಿ ಬರುತ್ತಿದ್ದಾಗ ಪಿರಿಯಾಪಟ್ಟಣ ತಾಲೂಕಿನ ಪುನಾಡ ಹಳ್ಳಿ ಗೇಟ್ ಬಳಿ ವಾಹನ ನಿಲ್ಲಿಸುವಂತೆ ಚಾಲಕಗೆ ತಿಳಿಸಿ ಮೂತ್ರ ವಿಸರ್ಜನೆಗೆಂದು ರಸ್ತೆ ದಾಟಲು ತೆರಳಿದ್ದರು. ಈ ವೇಳೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಿಂದ ಪ್ರವಾಸವನ್ನು ಮೊಟಕುಗೊಳಿಸಿ ವಿದ್ಯಾರ್ಥಿಗಳನ್ನು ಪಟ್ಟಣದ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಉಳಿಸಿ ಮರುದಿನ ಅವರ ಊರಿಗೆ ಕಳುಹಿಸಲಾಯಿತು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗಣೇಸ್ ಕುಮಾರ್ ಮಕ್ಕಳಿಗೆ ಊಟೋಪಚಾರದ ವ್ಯವಸ್ಥೆ ಮಾಡಿದ್ದರು. ಘಟನೆ ಕುರಿತು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: