ಪ್ರಮುಖ ಸುದ್ದಿ

ಡಿ.28 ರಂದು ಬೆಂಗಳೂರಿನಲ್ಲಿ ‘ಪ್ಲ್ಯಾಗ್ ಮಾರ್ಚ್’

ರಾಜ್ಯ( ಮಡಿಕೇರಿ) ಡಿ.25 :- ಕೆಪಿಸಿಸಿ ವತಿಯಿಂದ ‘ಸಂವಿಧಾನ ಉಳಿಸಿ, ಭಾರತ ರಕ್ಷಿಸಿ’ ಘೋಷ ವಾಕ್ಯದೊಂದಿಗೆ ಡಿ.28 ರಂದು ಬೆಂಗಳೂರಿನ ಕೆಪಿಸಿಸಿ ಕಛೇರಿಯಿಂದ ಫ್ರೀಡಂ ಪಾರ್ಕ್‍ನ ಗಾಂಧಿ ಪ್ರತಿಮೆಯವರೆಗೆ ಸಂವಿಧಾನ ಉಳಿಸಿ ಭಾರತ ರಕ್ಷಿಸಿ ಘೋಷಣೆಯ ಅಡಿಯಲ್ಲಿ ಬಿಜೆಪಿಯ ಒಡೆದು ಆಳುವ ನೀತಿಯ ವಿರುದ್ಧ ಜನ ಜಾಗೃತಿ ಮೂಡಿಸುವ ‘ಪ್ಲ್ಯಾಗ್ ಮಾರ್ಚ್’ ನಡೆಯಲಿದೆಯೆಂದು ಈಶ್ವರ ಖಂಡ್ರೆ ಮಾಹಿತಿ ನೀಡಿದರು.
ಪೌರತ್ವ ತಿದ್ದುಪಡಿ ಕಾಯ್ದೆ ರಾಷ್ಟ್ರೀಯ ಪೌರತ್ವ ನೋಂದಣಿ ಮೊದಲಾದ ಕಾಯ್ದೆಗಳ ಮೂಲಕ ದೇಶವನ್ನು ಅಶಾಂತಿಯೆಡೆಗೆ ತಳ್ಳಿರುವ ಪ್ರಧಾನಿ ಮೋದಿ ಅವರು ದೇಶದ 130 ಕೋಟಿ ಜನರ ಕ್ಷಮೆ ಕೇಳ ಬೇಕೆಂದು ಈಶ್ವರ ಖಂಡ್ರೆ ಆಗ್ರಹಿಸಿದರು.
ಅಖಿಲ ಭಾರತ ಕಾಂಗ್ರೆಸ್ ಸಮಿತ್ರಿಯ ಆದೇಶದ ಅನುಸಾರ ಜನವರಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪುನರ್ ರಚನೆ ನಡೆಯುತ್ತದೆಂದು ಈಶ್ವರ ಖಂಡ್ರೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: