ಪ್ರಮುಖ ಸುದ್ದಿವಿದೇಶ

ಕೆನಡಾದ ಪೋರ್ಟ್ ಹಾರ್ಡಿಯಲ್ಲಿ 6.2 ತೀವ್ರತೆಯ ಭೂಕಂಪ

ದೇಶ(ನವದೆಹಲಿ)ಡಿ.26:- ಕೆನಡಾದ ಪೋರ್ಟ್ ಹಾರ್ಡಿಯಲ್ಲಿ ರಿಕ್ಟರ್ ಪ್ರಮಾಣದಲ್ಲಿ ಬುಧವಾರ 6.2 ತೀವ್ರತೆಯ ಭೂಕಂಪ ದಾಖಲಾಗಿದೆ.

ಪ್ರಾಥಮಿಕವಾಗಿ ಭೂಕಂಪದ ಕೇಂದ್ರ 0.573 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 130.001 ಡಿಗ್ರಿ ಪಶ್ಚಿಮ ರೇಖಾಂಶದಲ್ಲಿ 1 ಕಿಲೋಮೀಟರ್ ಆಳದಲ್ಲಿ ಇದೇ ಎಂದು ಹೇಳಲಾಗಿತ್ತು. ಆದರೆ, ಪೆಸಿಫಿಕ್ ಸುನಾಮಿ ಎಚ್ಚರಿಕಾ ಕೇಂದ್ರ ಸದ್ಯ ಯಾವುದೇ ರೀತಿಯ ಸುನಾಮಿ ಭೀತಿ ವರ್ತಿಸಿಲ್ಲ.

ದೆಹಲಿ-ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದಲ್ಲಿ ಈ ಭೂಕಂಪದ ಪರಿಣಾಮ ಕಂಡುಬಂದಿತ್ತು. ಸಂಜೆ 5.13 ಕ್ಕೆ ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಹಲವಾರು ಸೆಕೆಂಡುಗಳ ಕಾಲ ಭೂಮಿ ನಡುಗಿತ್ತು ಎಂದು ಚಂಡೀಗಢದ ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಭಾರತ ಹವಾಮಾನ ಇಲಾಖೆಯ ಪ್ರಕಾರ, ಭೂಕಂಪದ ಕೇಂದ್ರ 190ಕಿ.ಮೀ ಆಳದಲ್ಲಿದೆ ಎಂದಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ ಈ ಭೂಕಂಪದ  ತೀವ್ರತೆ ರಿಕ್ಟರ್ ಮಾಪಕದಲ್ಲಿ  7.1 ಎಂದು ಹೇಳಿದ್ದ ಇಲಾಖೆ ನಂತರ ಅದನ್ನು ಪರಿಷ್ಕರಿಸಿತ್ತು. ಸದ್ಯ ಭೂಕಂಪದಲ್ಲಿ ಯಾವುದೇ ರೀತಿಯ ಹಾನಿಯಾಗಿರುವ ಕುರಿತು ವರದಿಯಾಗಿಲ್ಲ. (ಎಸ್.ಎಚ್)

Leave a Reply

comments

Related Articles

error: