ಮೈಸೂರು

ಮಹಿಳೆಯರ ಉದ್ದಿಮೆ ಸಹಕಾರಿ ನೆರವು ಅರಿವು ಕಾರ್ಯಕ್ರಮ

ಮೈಸೂರು,ಡಿ.26:- ಅಗಸ್ತ್ಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ರಜತ ಮಹೋತ್ಸವ ಅಂಗವಾಗಿ “ಮಹಿಳೆಯರ ಉದ್ದಿಮೆ ಸಹಕಾರಿ ನೆರವು ಅರಿವು” ಕಾರ್ಯಕ್ರಮವನ್ನು ವಿಜಯನಗರದ ಬ್ಯಾಂಕ್ ಶಾಖೆ ಆವರಣದಲ್ಲಿ ನಿನ್ನೆ ಆಯೋಜಿಸಲಾಗಿತ್ತು.

ಮಹಿಳೆಯರ ಸಣ್ಣಪುಟ್ಟ ಸ್ವಂತ ಉದ್ಯಮವಾದ ದಿನಬಳಕೆ ಗೃಹಬಳಕೆ ಮತ್ತು ಕಾಂಡಿಮೆಂಟ್ಸ್ ಪದಾರ್ಥಗಳ ತಯಾರಿಕೆ ಮಾರಾಟಗಾರರ ಪರಿಚಯವನ್ನು ಸದಸ್ಯರಿಗೆ ಮಾಡಿಕೊಡುವ ಅವಕಾಶ ಕಲ್ಪಿಸಲಾಗಿತ್ತು.  ಅಗಸ್ತ್ಯ  ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಸಿ.ವಿ ಪಾರ್ಥ ಸಾರಥಿ ಉದ್ಘಾಟನೆ ನೆರವೇರಿಸಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಮುಖ್ಯವಾಹಿನಿಗೆ ಬರಬೇಕಾಗಿದೆ. ಮಾರುಕಟ್ಟೆಯಲ್ಲಿ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಉತ್ತಮ ಬೆಲೆಯಿದೆ. ಅದರಲ್ಲೂ ವಿಶೇಷವಾಗಿ ಅಡುಗೆ ಪದಾರ್ಥಗಳು, ದಿನಬಳಕೆ ಮತ್ತು ಗೃಹಬಳಕೆ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ. ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಕೆಲಸವಿಲ್ಲವೆಂದು ಕೇವಲ ಟಿವಿ ಧಾರವಾಹಿ ನೋಡುವ ಜೊತೆಯಲ್ಲೆ ಕ್ಯಾಂಡೆಲ್, ಸೋಪು, ಚಾಕಲೇಟ್, ಕಾಂಡಿಮೆಂಟ್, ಅಡಿಕೆ ತಟ್ಟೆ, ಪೇಪರ್ ಲೋಟ, ಪೇಪರ್ ಬ್ಯಾಗ್, ಬಟ್ಟೆ ಹೊಲಿಗೆ ಸೇರಿದಂತೆ ಸಾಕಷ್ಟು ಉತ್ಪನ್ನಗಳು ತಯಾರಿಸಬಹುದು.  ಇದಕ್ಕೆ ಸಹಕಾರಿ ಸಂಘ ಸಂಸ್ಥೆಗಳಲ್ಲೂ ಸಹ ವಿಶೇಷ ಯೋಜನೆಗಳಿವೆ. ಇದನ್ನು ಸದುಪಯೋಗಿಸಿಕೊಳ್ಳಲು ಮಹಿಳಾ ಸಂಘ ಸಂಸ್ಥೆಗಳು ಮುಂದಾಗಬೇಕು ಎಂದರು.

ಈ ಸಂದರ್ಭ ಸೊಸೈಟಿಯ ಉಪಾಧ್ಯಕ್ಷರಾದ ಪ್ರಶಾಂತ್ ತಾತಾಚಾರ್ (ಕಣ್ಣ),ಖಜಾಂಜಿ ಎಂಡಿ ಗೋಪಿನಾಥ್ , ನಿರ್ದೇಶಕರುಗಳಾದ ಕೆ ನಾಗರಾಜ್,ಶ್ರೀನಿವಾಸ್ ಶರ್ಮ, ಫಣಿರಾಜ್, ಎಂಆರ್ ಬಾಲಕೃಷ್ಣ,ಪ್ರೀತಮ್ , ರಂಗನಾಥ್ ,ಅರುಣ್, ಎಸ್ ಎನ್ ನಾಗಶಂಕರ್ ,ರೇಖಾ, ಸೌಮ್ಯಾ, ಕಾರ್ಯದರ್ಶಿ  ವೀಣಾ ,ಹಾಗೂ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: