ಮೈಸೂರು

ಮೈಸೂರು ಮೃಗಾಲಯದ ‘ಬ್ಲ್ಯಾಕ್ ಪ್ಯಾಂಥರ್’ ದತ್ತು ಸ್ವೀಕರಿಸಿದ ಪ್ರಜ್ವಲ್ ಕರಿಯಪ್ಪ

ಮೈಸೂರು,ಡಿ.26:- ಚನ್ನಪಟ್ಟಣದ ಪ್ರಜ್ವಲ್ ಕರಿಯಪ್ಪ ಎಂಬವರು 35,000ರೂ.ಗಳನ್ನು ಪಾವತಿಸಿ ಮೈಸೂರು ಮೃಗಾಲಯದ ಒಂದು ‘ಬ್ಲ್ಯಾಕ್ ಪ್ಯಾಂಥರ್’ ನ್ನು 12/1/2020ರಿಂದ 11/12/2021ರವರೆಗೆ ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿದ್ದಾರೆ.

ಪ್ರಾಣಿ ಸಂರಕ್ಷಣೆಯ ಸತ್ಕಾರ್ಯಕ್ಕೆ ಅವರು ನೀಡಿರುವ ಮಹತ್ತರ ಬೆಂಬಲ ಇದಾಗಿದ್ದು, ಅವರ ಈ ಕಾರ್ಯ ಇತರೆ ವ್ಯಕ್ತಿಗಳು ಮತ್ತು ಸಂಘಸಂಸ್ಥೆಗಳು ಸ್ವತಃ ಮುಂದೆ ಬಂದು ಪ್ರಾಣಿ ಸಂರಕ್ಷಣೆಯ ಮಹತ್ಕಾರ್ಯದಲ್ಲಿ ಭಾಗಿಯಾಗಲು ಪ್ರೇರಕವಾಗಿರುತ್ತದೆ. ಪ್ರಾಣಿಗಳ ಸಂರಕ್ಷಣೆಯ ಜಂಟಿ ಪ್ರಯತ್ನದ ಯೋಜನೆಗೆ ಇದೇ ರೀತಿಯ ಬೆಂಬಲ/ಸಹಕಾರವನ್ನು ಮುಂದುವರಿಸಬೇಕು. ಮೃಗಾಲಯದ ಪ್ರಾಣಿಗಳ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಅವುಗಳ ಸಂರಕ್ಷಣೆಗೆ ವಿಶೇಷ ಒಲವಿನಿಂದ ತಮ್ಮ ಬೆಂಬಲವನ್ನು ನೀಡಿರುವ ಚನ್ನಪಟ್ಟಣದ ಪ್ರಜ್ವಲ್ ಕರಿಯಪ್ಪ   ಅವರನ್ನು ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಅಭಿನಂದಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: