ಮೈಸೂರು

ಪೊಲೀಸ್ ಜೀಪ್ ಆಕಸ್ಮಿಕವಾಗಿ  ವಿದ್ಯುತ್ ಕಂಬಕ್ಕೆ ಡಿಕ್ಕಿ : ಮುರಿದು ಬಿದ್ದ ವಿದ್ಯುತ್ ಕಂಬ ; ಅಪಾಯದಿಂದ ಪಾರು

ಮೈಸೂರು,ಡಿ.26:-  ಕಾನ್ಸಟೇಬಲ್ ಓರ್ವರು ಪೊಲೀಸ್ ಜೀಪ್ ಚಾಲನೆ ಮಾಡುತ್ತಿದ್ದ  ವೇಳೆ ಜೀಪ್ ಆಕಸ್ಮಿಕವಾಗಿ  ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬ ಸಂಪೂರ್ಣವಾಗಿ ಮುರಿದು  ಕೆಳಗಿ ಬಿದ್ದ ಘಟನೆ ಹುಣಸೂರಿನಲ್ಲಿ ನಡೆದಿದ್ದು, ದೇವರ ದಯೆಯಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ.

ಹುಣಸೂರು ಪಟ್ಟಣ ಠಾಣೆಯ  ಕಾನ್ಸಟೇಬಲ್ ಶೇಖರ್ ಎಂಬವರು  ಎ.ಎಸ್. ಐ ರುದ್ರೇಗೌಡ ಅವರನ್ನು ಕೂರಿಸಿಕೊಂಡು ಇಂದು ಬೆಳಿಗ್ಗೆ 9 ಗಂಟೆಯಲ್ಲಿ ವೇಗವಾಗಿ ಬಂದ ಪರಿಣಾಮ ಆಯತಪ್ಪಿದ   ಜೀಪ್ ಬಸ್ ನಿಲ್ದಾಣ ಸಮೀಪದ ಹನುಮಾನ್ ಸ್ವೀಟ್ಸ್  ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ  ರಭಸಕ್ಕೆ ತಂತಿಗಳು ಕೆಳಗೆ ಬಿದ್ದಿವೆ.   ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ  ಡಿಕ್ಕಿ ಹೊಡೆದ ರಭಸಕ್ಕೆ ಜೀಪ್ ನ ಮುಂಭಾಗ ಸಂಪೂರ್ಣ ಜಖಂ‌ ಆದರೆ. ವಿದ್ಯುತ್ ಕಂಬ ಕೆಳಗುರುಳಿ ಬಿದ್ದಿದೆ. ಘಟನೆಯಿಂದ ಎಎಸ್ ಐ ರುದ್ರೇಗೌಡ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಚಾಲಕ ಶೇಖರ್ ಅವರಿಗೆ  ಯಾವುದೇ ಗಾಯವಾಗಿಲ್ಲ. ಅಪಘಾತದಿಂದ ಮುರಿದು ಬಿದ್ದಿರುವ ವಿದ್ಯುತ್ ಕಂಬದ ಸ್ಥಳದಲ್ಲಿ ಕೂಡಲೇ ಹೊಸ ವಿದ್ಯುತ್ ಕಂಬ ಹಾಕಲು  ಇಲಾಖೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: