ದೇಶಪ್ರಮುಖ ಸುದ್ದಿ

ರಾಹುಲ್ ಗಾಂಧಿ ಮೇಲೆ ಶೂ ಎಸೆತ

ಉತ್ತರಪ್ರದೇಶದ ಸೀತಾಪುರದಲ್ಲಿ ರೋಡ್ ಶೋ ನಡೆಸುತ್ತಿದ್ದ ಸಂದರ್ಭ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೇಲೆ ಶೂ ಎಸೆತ ನಡೆದಿದೆ. ಉತ್ತರಪ್ರದೇಶದಲ್ಲಿ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ರಾಹುಲ್ ಪ್ರಚಾರ ನಡೆಸಲು ತೆರಳಿದ್ದರು.

ಶೂ ಎಸೆದವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ರೈತರ ಸಮಸ್ಯೆಗಳನ್ನು ಅರಿಯಲು ರಾಹುಲ್ ‘ಕಾಟ್ ಪೆ ಚರ್ಚಾ’ ಎಂಬ ಹೆಸರಿನಲ್ಲಿ ಉತ್ತರಪ್ರದೇಶದ ವಿವಿಧೆಡೆ ಸಭೆಗಳನ್ನು ಕೂಡ ನಡೆಸಲಿದ್ದಾರೆ.

ಸೆ.6ರಂದು ಕಾಂಗ್ರೆಸ್‍ನ ನೂತನ ಕಾರ್ಯಕ್ರಮ ‘ಕಾಟ್ ಪೆ ಚರ್ಚಾ’ ಉತ್ತರಪ್ರದೇಶದ ದೇವರಿಯ ಜಿಲ್ಲೆಯಲ್ಲಿ ನಡೆದಿತ್ತು. ಕಾಟ್(ಮಂಚ) ಮೇಲೆ ಕುಳಿತು ರೈತರೊಂದಿಗೆ ಸಂವಾದ ನಡೆಸುವುದು ಈ ಕಾರ್ಯಕ್ರಮದ ಉದ್ದೇಶ. ಆದರೆ, ಜನರು ಮಾತ್ರ ರಾಹುಲ್ ಗಾಂಧಿ ಭಾಷಣ ಮುಗಿಯುತ್ತಿದ್ದ ಹಾಗೆ ಮಂಚಗಳನ್ನು ಎತ್ತಿಕೊಂಡು ಓಡಲಾರಂಭಿಸಿದರು. ಈ ಘಟನೆಯಿಂದ ಕಾಂಗ್ರೆಸ್‍ನ ‘ಕಾಟ್ ಪೆ ಚರ್ಚಾ’ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೀಡಾದ ಪ್ರಸಂಗ ಕೂಡ ನಡೆದಿತ್ತು.

Leave a Reply

comments

Tags

Related Articles

error: