
ಪ್ರಮುಖ ಸುದ್ದಿವಿದೇಶ
ಕಜಕಿಸ್ತಾನ್ ದಲ್ಲಿ ನೂರು ಪ್ರಯಾಣಿಕರನ್ನು ಹೊತ್ತ ವಿಮಾನ ಅಪಘಾತ : 7ಮಂದಿ ಸಾವಿನ ಶಂಕೆ
ವಿದೇಶ(ಕಜಕಿಸ್ತಾನ್)ಡಿ.27:- ಪಾಕಿಸ್ತಾನದ ಕಜಕಿಸ್ತಾನ್ ದಲ್ಲಿ ವಿಮಾನ ಅಪಘಾತವಾಗಿದೆ ಎನ್ನಲಾಗುತ್ತಿದೆ. 100 ಪ್ರಯಾಣಿಕರನ್ನು ಹೊತ್ತ ವಿಮಾನ ಕಜಕಿಸ್ತಾನದಲ್ಲಿ ಅಪಘಾತಕ್ಕೀಡಾಗಿದೆ.
ಕಜಕಿಸ್ತಾನದ ಅಲ್ಮಾಟಿ ವಿಮಾನ ನಿಲ್ದಾಣದಲ್ಲಿ ಟೇಕ್-ಆಫ್ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ, ಇದರಲ್ಲಿ ಸುಮಾರು 7 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ವಿಮಾನವು ಅಲ್ಮಾಟಿ ನಗರದಿಂದ ರಾಜಧಾನಿ ನೂರ್ ಸುಲ್ತಾನ್ ಕಡೆಗೆ ಹೋಗುತ್ತಿತ್ತು, ಅದೇ ಸಮಯದಲ್ಲಿ ಅಪಘಾತ ಸಂಭವಿಸಿದೆ.
ಕಜಕಿಸ್ತಾನ್ ಅಲ್ಮಾಟಿ ನಗರದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ 95 ಪ್ರಯಾಣಿಕರು ಮತ್ತು ಐದು ಮಂದಿ ಸಿಬ್ಬಂದಿ ಇದ್ದಾರೆ ಎಂಬ ಮಾಹಿತಿಯನ್ನು ಮಧ್ಯ ಏಷ್ಯಾ ರಾಷ್ಟ್ರ ನೀಡಿದೆ.
ಟೇಕ್ಆಫ್ ಆದ ನಂತರ ಸ್ಥಳೀಯ ಸಮಯ ಬೆಳಿಗ್ಗೆ 7. 22. ವಿಮಾನದ ಸಮತೋಲನ ತಪ್ಪಿದ್ದು, ನಂತರ ಅದು ಎರಡು ಅಂತಸ್ತಿನ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ಪ್ರಯಾಣಿಕರನ್ನು ಸ್ಥಳಾಂತರಿಸಲು ತುರ್ತು ಸೇವೆಗಳು ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. (ಎಸ್.ಎಚ್)