ಮೈಸೂರು

 ಗೃಹ ರಕ್ಷಕ ದಳದ ಸಿಬ್ಬಂದಿಗಳು ಹೆಚ್ಚು  ಕೌಶಲಗಳನ್ನು ಕಲಿಯಬೇಕು : ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ನೇಹಾ ಸಲಹೆ

ಮೈಸೂರು,ಡಿ.27:-  ಗೃಹ ರಕ್ಷಕ ದಳದ ಸಿಬ್ಬಂದಿಗಳು ಹೆಚ್ಚು  ಕೌಶಲಗಳನ್ನು ಕಲಿಯಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ನೇಹಾ ಸಲಹೆ ನೀಡಿದರು.

ತಿ.ಮರಸೀಪುರ ಪಟ್ಟಣದ ವಿದ್ಯೋದಯ ಕಾಲೇಜು ಮೈದಾನದಲ್ಲಿ  ಇತ್ತೀಚೆಗೆ ಆಯೋಜಿಸಿದ್ದ ಅಖಿಲ ಭಾರತ ಗೃಹ ರಕ್ಷಕ ದಳದ ವಾರ್ಷಿಕ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಜನರು ಗೃಹ ರಕ್ಷಕ ದಳದವರು ಎಂದು ನಿರ್ಲಕ್ಷ್ಯ ಮಾಡಿದರೂ ನಿಮ್ಮ ವೃತ್ತಿಗೆ ಗೌರವ ನೀಡಿ. ಜತೆಗೆ ವೃತ್ತಿಯಲ್ಲಿ ಸ್ವಾವಲಂಬನೆ ಇಟ್ಟುಕೊಂಡು ಹೆಚ್ಚು ಕೌಶಲಗಳನ್ನು ಕಲಿತರೆ ಯಶಸ್ಸು ಪಡೆಯಬಹುದು ಎಂದರು.

ವಿದ್ಯೋದಯ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಹದೇವಸ್ವಾಮಿ ಮಾತನಾಡಿ  ಆಂತರಿಕ ಭದ್ರತೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಗೆ ಹೆಚ್ಚಿನ ಸಹಕಾರವನ್ನು ಗೃಹ ರಕ್ಷಕ ದಳ ನೀಡುತ್ತಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ವ್ಯವಸ್ಥಿತ ಕಾರ್ಯಕ್ರಮಗಳಲ್ಲಿ ಗೃಹ ರಕ್ಷಕ ದಳದ ಸಿಬ್ಬಂದಿಯ ಕರ್ತವ್ಯ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಅವರ ವೃತ್ತಿ ಸೇವೆಗೆ ಅಭಿನಂದನೀಯ ಎಂದರು.

ಕಾರ್ಯಕ್ರಮದಲ್ಲಿ ನಂಜನಗೂಡು ಡಿವೈಎಸ್‌ಪಿ ಪ್ರಭಾಕರ್ ರಾವ್ ಸಿಂಧೆ, ಸಿಪಿಐ ಎಂ.ಆರ್.ಲವ, ಪಿಎಸ್‌ಐ ಶಬ್ಬೀರ್ ಹುಸೇನ್, ಅಗ್ನಿಶಾಮಕ ಠಾಣಾಧಿಕಾರಿ ಪ್ರಕಾಶ್, ಭಾರತ್ ಜ್ಯೋತಿ ಪ್ರಶಸ್ತಿ ಪುರಸ್ಕೃತ ಡಾ.ಆಲಗೂಡು ಚಂದ್ರಶೇಖರ್, ಸಮಾಜ ಸೇವಕ ಮಾದೇಶ, ಗುತ್ತಿಗೆದಾರರ ಸಂಘದ ಹೊಸಪುರ ಮಲ್ಲು, ಡಾ.ಪಿ.ಮಾದೇಶ್, ಎಂ.ಎನ್.ವಿಶ್ವನಾಥ್, ಶಿಲ್ಪಾ, ಶಿವಣ್ಣ  ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: