ಮೈಸೂರು

ಪೊಲೀಸ್ ಅಧಿಕಾರಿಯಿಂದ ಮಾನಸಿಕ ಹಿಂಸೆ: ಡಿಎಸ್ಎಸ್ ಖಂಡನೆ

ಲಷ್ಕರ್ ಠಾಣೆಯ ಅಧಿಕಾರಿ ಹೆಚ್.ಎಂ. ಕಾಂತರಾಜು ಅವರಿಗೆ ಕ್ರಿಶ್ಚಿಯನ್ ಸಮುದಾಯದ ಲಷ್ಕರ್ ಮೊಹಲ್ಲಾದಲ್ಲಿರುವ ಪ್ರಾರ್ಥನ ಮಂದಿರದ ವಿಷಯವಾಗಿ ದೂರು ನೀಡಲು ದಿನಾಂಕ 05/02/2017 ರಂದು ನಾನು ಮತ್ತು ನನ್ನ ಪತ್ನಿ ಹೋಗಿದ್ದ ಸಂದರ್ಭದಲ್ಲಿ ಆ ಅಧಿಕಾರಿಯು ನಮ್ಮನ್ನು ಮಾನಸಿಕವಾಗಿ ನಿಂದಿಸಿ ಅವಮಾನ ಮಾಡಿದ್ದಾರೆಂದು ಗಾಡ್ ವಿನ್ ಪಾಲ್ ದೂರಿದರು.

ಮಂಗಳವಾರ ನಗರದ ಪತ್ರಕರ್ತ ಭವನದಲ್ಲಿ ನಡೆದ ಸುದ್ದಿಗೋಷ‍್ಠಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಇಂತಹ ನಡವಳಿಕೆಯನ್ನು ತೀವ್ರವಾಗಿ ಖಂಡಿಸುತ್ತದೆ. ಈ ಸಂಬಂಧ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ವಿಚಾರವನ್ನು ತಿಳಿಸಿದ್ದು ಅವರು ಸಹ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಹೆಚ್.ಎಂ.ಕಾಂತರಾಜು ವಿರುದ‍್ಧ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ನಮ್ಮ ರಕ್ಷಣೆಗೆ ಇಲಾಖೆ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ ಎಂದು ಆರೋಪಿಸಿದರು.

ನಮ್ಮ ದೂರು ಸ್ವೀಕರಿಸಿದ ನಂತರ ಅಲ್ಲಿದ್ದ ಆರೋಪಿಯನ್ನು ಗೌರವವಾಗಿ ನಡೆಸಿಕೊಂಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ನಮ್ಮ ಎದುರು ಪಾರ್ಟಿಯಾದ ಕೆ.ಜಿ.ಸಾಲೋಮನ್ ಮತ್ತು ಆತನ ಮಗ ಕೆ.ಎಸ್.ಸಾಮ್ ವಿಕ್ಸರ್ ಹಾಗೂ ಅಬ್ರಹಾಂ ಇವರು ಕಾನೂನು ಬಾಹಿರವಾಗಿ ಅಲ್ಲಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದು, ಅದಕ್ಕೆ ಹೆಚ್.ಎಮ್.ಕಾಂತರಾಜು ಅವರ ಕುಮ್ಮಕ್ಕು ಇದೆ. ಹೀಗಾಗಿ ಇವರ ಮೇಲೆ ಇನ್ನು 7 ದಿನಗಳೊಳಗೆ ಕಾನೂನು ರೀತಿ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ನೊಂದವರ ಜೊತೆಗೂಡಿ ಧರಣಿ ನಡೆಸಬೇಕಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲೇಶ್ ಚುಂಚನಹಳ್ಳಿ ಎಚ್ಚರಿಸಿದರು.

ಸಮಿತಿಯ ಪದಾಧಿಕಾರಿಗಳಾದ ಶ್ರೀನಿವಾಸ್ ಬಂಬೂಬಜಾರ್, ಚಂದ್ರಶೇಖರ ಅಲಗೂಡು, ಹನುಮಂತು ಬೆಲವತ್ತ, ನಾಗರಾಜ್ ಮಲಾರ, ನಾಗರತ್ನ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: