ಮನರಂಜನೆ

 ಬಾಲಿವುಡ್ ಬಿಗ್ ಅಮಿತಾಬ್ ಬಚ್ಚನ್ ಕೂಡ ಕಳ್ಳತನ ಮಾಡಿದ್ದರಂತೆ !:  ಕೋಲು ಮುರಿಯುವಷ್ಟು ಹೊಡೆದಿದ್ದರಂತೆ ಅಮ್ಮ

ದೇಶ(ನವದೆಹಲಿ)ಡಿ.27:- ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯಕ್ಕಾಗಿ ಎಷ್ಟು ಪ್ರಶಂಸನೀಯರೋ, ಅಷ್ಟೇ ಸಂಸಸ್ಕಾರವಂತರೂ ಕೂಡ ಆಗಿದ್ದಾರೆ.

ಸಂಸ್ಕಾರದ ವಿಷಯ ಬಂದಾಗ ಅವರ ತಂದೆ ಹರಿವಂಶರಾಯ್ ಬಚ್ಚನ್ ತೇಜಿ ಬಚ್ಚನ್   ಉಲ್ಲೇಖಿಸದಿರಲು ಸಾಧ್ಯವೇ ಇಲ್ಲ. ಡುತ್ತಾರೆ.  ಲೇಖಕಿ ಶೀಲಾ ಝುನ್ ಝುನ್ ವಾಲಾ  ತಮ್ಮ ಪುಸ್ತಕದಲ್ಲಿ ಅಮಿತಾಬ್ ಬಚ್ಚನ್ ಅವರ ಕಥೆಗಳನ್ನು ಬಹಿರಂಗಪಡಿಸಿದ್ದು,  ಅಮಿತಾಬ್ ಬಚ್ಚನ್ ಅವರ ಬಾಲ್ಯದ ಕಿಡಿಗೇಡಿತನದ ಕುರಿತು ‘ ಸಿನೆ ಸಿತಾರೋಂಕೆ ಅನಚ್ಛುಯೇ ಪ್ರಸಂಗ’ ಪುಸ್ತಕದಲ್ಲಿ  ಬರೆದಿದ್ದಾರೆ.

ಅಮಿತಾಬ್ ಮತ್ತು ಅಜಿತಾಬ್ ಇಬ್ಬರೂ ಸಹೋದರರು ತಾಯಿಗೆ ಹತ್ತಿರವಾಗಿದ್ದರಂತೆ. ಆದರೆ ತಂದೆಗೆ ಹೆದರುತ್ತಿದ್ದರಂತೆ. ಯಾಕೆಂದರೆ ಅವರು ಮನೆಯಲ್ಲಿ ಕೂಡ  ಶಿಸ್ತನ್ನು ಪಾಲಿಸುತ್ತಿದ್ದಂತೆ.   ಅದಕ್ಕಾಗಿ ಅವರು ಮನೆಯಲ್ಲಿದ್ದಾಗ ಇಬ್ಬರೂ ಸಹೋದರರು  ಓದಿನಲ್ಲಿ ಮಗ್ನರಾಗಿರುತ್ತಿದ್ದರಂತೆ.  ಆದರೆ ಕಿಡಿಗೇಡಿತನ ಮಾಡಿದಾಗ ತಾಯಿ ಗದರುತ್ತಿದ್ದರಾದರೂ  ಅರ್ಥವಾಗುವಂತೆ ವಿವರಿಸುತ್ತಿದ್ದರಂತೆ.  ಅನೇಕ ಬಾರಿ ತಾಯಿ ಅಮಿತಾಬ್‌ ಬಚ್ಚನ್ ಅವರು  ತಂದೆಯಿಂದ ಏಟು ತಿನ್ನುವುದನ್ನು ತಪ್ಪಿಸಿದ್ದರಂತೆ.

ಒಂದು ಸಲ ತಾಯಿ ತೇಜಿ ಬಚ್ಚನ್ ಅಮಿತಾಬ್‌ ರನ್ನು ಕೋಲಿನಿಂದ ಹೊಡೆದಿದ್ದಾಗಿ ಶೀಲಾ  ಝುನ್ ಝುನ್ ವಾಲಾ  ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಕೋಲು ಮುರಿದು ಹೋಗುವಷ್ಟು ಹೊಡೆದಿದ್ದರು ಎಂದು ಪುಸ್ತಕದಲ್ಲಿ ಬರೆದಿದ್ದಾರಂತೆ. ಈ ಹೊಡೆತದಿಂದ ಅಮಿತಾಬ್ ಅವರ ದೇಹದಲ್ಲಿ ಬಾಸುಂಡೆಗಳೆದ್ದಿದ್ದವಂತೆ.  ಅಮ್ಮ ಯಾಕೆ ಹೊಡೆದಿದ್ದರು ಎಂಬುದನ್ನು ಅವರು   ಬಹಿರಂಗಪಡಿಸಿದ್ದು, ಅಮಿತಾಬ್ ಅವರು ಹೇಳದೆ ಕೇಳದೆ ಅಂಗಡಿಯಿಂದ ಒಂದು ಇರೇಸರ್ ಎತ್ತಿಕೊಂಡಿದ್ದರಂತೆ.

ಅವರು ಇದನ್ನು ಉದ್ದೇಶಪೂರ್ವಕವಾಗಿ ಮಾಡಲಿಲ್ಲವಾದರೂ  ಅವರ ತಾಯಿಯ ಪ್ರಕಾರ, ಕಳ್ಳತನ  ಕಳ್ಳತನವೇ.  ಈ ವಿಷಯ ತಿಳಿದಾಗ  ಅವರು ಅಮಿತಾಬ್‌ ರನ್ನು ಕೋಲಿನಿಂದ ಹೊಡೆಯಲು ಪ್ರಾರಂಭಿಸಿದ್ದು,  ಎಷ್ಟು ಹೊಡೆದರೆಂದರೆ ಕೋಲೇ ಮುರಿದು ಹೋಯಿತಂತೆ.

ಒಂದು ಕೋಲು ಮುರಿದಾಗ ಮತ್ತೊಂದು ಕೋಲನ್ನು ಎತ್ತಿಕೊಂಡರಂತೆ.  ಅಮಿತಾಬ್ ನೋವಿನಿಂದ ಕಿರುಚುತ್ತಿದ್ದು, ಜೋರಾಗಿ ಅತ್ತರಂತೆ.  ಅಪರಾಧ ಮಾಡಿದ್ದರೆ, ನೋವು ಸಹಿಸಿಕೊಳ್ಳುವ ಧೈರ್ಯವನ್ನು ಬೆಳೆಸಿಕೋ   ತಪ್ಪನ್ನು ಸುಧಾರಿಸಲು ಕಷ್ಟವನ್ನು ಅನುಭವಿಸಲೇ ಬೇಕು ಎಂದಿದ್ದರಂತೆ.

ಜೋರಾಗಿ ಹೊಡೆದಿದ್ದರಿಂದ ಶರೀರ ನೋವಿನಿಂದ ಕೂಡಿದ್ದು, ಅತ್ತು ಅತ್ತು ಕಣ್ಣು ಕೆಂಪಗಾಗಿತ್ತಂತೆ. ಇಷ್ಟಾದರೂ ಮರುದಿನ ಶಾಲೆಗೆ ಕಳುಹಿಸಿದ್ದರಂತೆ. ಯಾಕೆಂದರೆ ಎಲ್ಲರಿಗೂ ಇವರು ಏನು ತಪ್ಪು ಮಾಡಿದ್ದರೆಂದು ತಿಳಿಯಲೆಂದು ಶಾಲೆಗೆ ಕಳುಹಿಸಿದ್ದರಂತೆ. (ಎಸ್.ಎಚ್)

Leave a Reply

comments

Related Articles

error: