ಮೈಸೂರು

ಡಿ.29 : ಶ್ರೀ ಕನಕದಾಸ ಹಿತರಕ್ಷಣಾ ಸಮಿತಿಯಿಂದ ಕನಕ ಜಯಂತಿ

ಮೈಸೂರು,ಡಿ.27:- ಡಿಸೆಂಬರ್ 29  ರಂದು‌ಸಂತ ಶ್ರೇಷ್ಠ  ಕನಕ ಜಯಂತಿಯನ್ನು  ಶ್ರೀ ಕನಕದಾಸ ಹಿತರಕ್ಷಣಾ ಸಮಿತಿಯಿಂದ ವಿಜಯನಗರದ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ  ಎಂದು ಸಂಘದ ಗೌರವಾಧ್ಯಕ್ಷರಾದ ಮಂಜೇಗೌಡ ಮಾಹಿತಿ ನೀಡಿದರು.

ಮೈಸೂರು  ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿ  ನಡೆಸಿ ಮಾತನಾಡಿದ ಅವರು, ಅಂದು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವರು ಹಾಗೂ ವಿಧಾನಪರಿಷತ್ ಸದಸ್ಯರಾದ ಎಚ್.ಎಂ ರೇವಣ್ಣ ನೆರವೇರಿಸಲಿದ್ದು, ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನ ಮಾಜಿ ಸಚಿವರಾದ ಎನ್ ಚೆಲುವರಾಯ ಸ್ವಾಮಿ ಮಾಡಲಿದ್ದಾರೆ ಎಂದು ತಿಳಿಸಿದರು. ಜೊತೆಗೆ ಕ್ಯಾಲೆಂಡರ್  ನ್ನು  ಯತೀಂದ್ರ ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು. ಅಲ್ಲದೆ ಎಸ್‌.ಎಸ್.ಎಲ್.ಸಿ ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.  ಕನಕ ದಾಸರ ವಿಚಾರಗಳನ್ನು  ಕಾಡಾ ಸಹಾಯಕ ಅಧಿಕಾರಿಗಳಾದ ನಂಜುಂಡೇಗೌಡ ಪ್ರಸ್ತುತಪಡಿಸಲಿದ್ದಾರೆ ಎಂದರು. ಈ ವೇಳೆ ಚಿತ್ರ ನಟರಾದ ಕಲಾತಪಸ್ವಿ ರಾಜೇಶ್ ಮತ್ತು ಯೋಗೇಶ್ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಮಾಹಿತಿ ನೀಡಿದರು‌.

ಸುದ್ದಿಗೋಷ್ಠಿಯಲ್ಲಿ ರಾಜೇಗೌಡ, ಬಸವೇಗೌಡ, ಚಿನ್ನಪ್ಪ ಉಪಸ್ಥಿತರಿದ್ದರು.

Leave a Reply

comments

Related Articles

error: