ಪ್ರಮುಖ ಸುದ್ದಿ

ಕರ್ನಾಟಕವನ್ನು ಗೂಂಡಾ ರಾಜ್ಯವಾಗಿಸಲು ಬಿಡುವುದಿಲ್ಲ : ಸಚಿವ ಕೆ.ಎಸ್ ಈಶ್ವರಪ್ಪ

ರಾಜ್ಯ(ಬೆಂಗಳೂರು)ಡಿ.28:- ರಾಜ್ಯವನ್ನು  ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರೆ.   ಆದರೆ ಕರ್ನಾಟಕವನ್ನು ಗೂಂಡಾ ರಾಜ್ಯವಾಗಿಸಲು ಬಿಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

ಸಿಎಎ ಜಾರಿ ಮಾಡಿದ್ರೆ ರಾಜ್ಯ ಹೊತ್ತಿ ಉರಿಯುತ್ತದೆ  ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಯುಟಿ ಖಾದರ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ,  ಮಂಗಳೂರಿನಲ್ಲಿ ಗೂಂಡಾರಾಜ್ಯ ಮಾಡಲು ಕಾಂಗ್ರೆಸ್ಸಿಗರು ಹೊರಟಿದ್ದಾರೆ. ಹೀಗಾಗಿ ಯು.ಟಿ ಖಾದರ್ ಇಂತಹ ಹೇಳಿಕೆ ನೀಡಿದ್ದಾರೆ. ಜಮ್ಮುಕಾಶ್ಮೀರದಂತೆ ಮಂಗಳೂರಿನಲ್ಲೂ 370 ಇದ್ಯಾ..? ಮಂಗಳೂರು ಸಹ ಅಖಂಡ ಭಾರತದಲ್ಲಿದೆ. ಜಮ್ಮುಕಾಶ್ಮೀರವನ್ನೇ ಬಿಟ್ಟಿಲ್ಲ. ಇನ್ನು ಮಂಗಳೂರು ಬಿಡುತ್ತೇವಾ ಎಂದು ಟಾಂಗ್ ನೀಡಿದರು.

ಗೂಂಡಾಗಳು ಕರ್ನಾಟಕವನ್ನು ತಮ್ಮ ರಾಜ್ಯ ಎಂದುಕೊಂಡಿದ್ದಾರೆ. ಆದರೆ ಕರ್ನಾಟಕವನ್ನು ಗೂಂಡಾ ರಾಜ್ಯವಾಗಿಸಲು ಬಿಡುವುದಿಲ್ಲ. ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದ್ರೆ ಕ್ರಮ ಕೈಗೊಳ್ಳುತ್ತೇವೆ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡುವವರನ್ನೇ ಹೊಣೆಗಾರರನ್ನಾಗಿ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: