ದೇಶಪ್ರಮುಖ ಸುದ್ದಿ

ದೆಹಲಿಯಲ್ಲಿ 2.4ಕ್ಕೆ ಕುಸಿದ ತಾಪಮಾನ: 30 ವರ್ಷದಲ್ಲೇ ಅತ್ಯಧಿಕ ಚಳಿ ದಾಖಲು

ನವದೆಹಲಿ,ಡಿ.28-ಭಾರೀ ಚಳಿಗೆ ರಾಷ್ಟ್ರ ರಾಜಧಾನಿ ದೆಹಲಿ ತತ್ತರಿಸಿದೆ. ಕಳೆದ ಮೂವತ್ತು ವರ್ಷದಲ್ಲಿಯೇ ಅತ್ಯಧಿಕ ಚಳಿ ದಾಖಲಾಗಿದೆ.

ದೆಹಲಿಯಲ್ಲಿ ಅತ್ಯಂತ ಕಡಿಮೆ ತಾಪಮಾನ ದಾಖಲಾಗಿದ್ದು, ಇಂದು ಬೆಳಿಗ್ಗೆ 2.4 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ.

ದಟ್ಟ ಮಂಜಿನಿಂದಾಗಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದೆ. ಅಲ್ಲದೆ, ವಿಮಾನ ಹಾರಾಟವನ್ನು ರದ್ದು ಮಾಡಲಾಗಿದೆ. ದಟ್ಟ ಮಂಜು ಮತ್ತು ಕಲುಷಿತ ಹೊಗೆ ಸೇರಿ ದೆಹಲಿಯ ಹವಾಮಾನ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು ಮಾಸ್ಕ್ ಯಿಲ್ಲದೆ ಜನರು ಹೊರಗೆ ಬರುವುದು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ.

ಕೇವಲ ದೆಹಲಿಯಷ್ಟೇ ಅಲ್ಲದೆ, ಉತ್ತರ ಭಾರತದ ಹಲವೆಡೆ ತೀವ್ರ ಚಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಉತ್ತರಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ ಸೇರಿದಂತೆ ಹಲವು ಭಾಗಗಳಲ್ಲಿ ಭಾರೀ ಚಳಿ ಇರುವುದಾಗಿ ವರದಿಗಳು ತಿಳಿಸಿವೆ. ಇನ್ನು ಕಾಶ್ಮೀರದಲ್ಲಂತೂ ಚಳಿ ಮಿತಿ ಮೀರಿದ್ದು, ದಾಲ್ ಸರೋವರ ಕಲ್ಲಾಗಿದೆ. ಶ್ರೀನಗರ ಹಾಗೂ ಕೆಲವ ಭಾಗಗಳಲ್ಲಿ ತೀವ್ರ ಮಂಜು ಆವರಿಸಿವೆ. (ಎಂ.ಎನ್)

Leave a Reply

comments

Related Articles

error: