ಮೈಸೂರು

ಅಮೇರಿಕಾ ವೈದ್ಯರೊಂದಿಗೆ ಹೃದ್ರೋಗಗಳ ಬಗ್ಗೆ ಸಂವಾದ

ಜೆಎಸ್ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಭವನದಲ್ಲಿ ಮಂಗಳವಾರ ‘ಹೃದ್ರೋಗ ವಿಜ್ಞಾನದಲ್ಲಿ ನವೀನ ಚಿಕಿತ್ಸೆ ಮತ್ತು ತಂತ್ರಜ್ಞಾನ’ ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿತ್ತು.

ವಿಶ್ವದ ಅತ್ಯಂತ ಸುಪ್ರಸಿದ್ಧ ಸಂಸ್ಥೆಗಳಲ್ಲಿ ಒಂದಾದ ಮೇಯೋ ಕ್ಲಿನಿಕ್ ರೋಚೆಸ್ಟರ್ ಅಮೇರಿಕಾ ಇಲ್ಲಿನ ತಜ್ಞ ವೈದ್ಯರ ತಂಡ ಜೆಎಸ್ಎಸ್ ಆಸ್ಪತ್ರೆಯ ಹೃದ್ರೋಗ ವಿಭಾಗದ ವೈದ್ಯರೊಡನೆ ಸಮಾಲೋಚನೆ ನಡೆಸಿದರು.

ಮೇಯೋ ಕ್ಲಿನಿಕ್ ಹೃದಯ ವಿಭಾಗದ ಚೇರ್ ಮ್ಯಾನ್ ಡಾ.ಚರನ್ ಜಿತ್ ರಿಹಾಲ್ ಅವರ ನೇತೃತ್ವದಲ್ಲಿ 5 ಜನ ತಜ್ಞರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ಹೃದಯಾಘಾತ, ಹೃದಯ ಕವಾಟ ಚಿಕಿತ್ಸೆ, ಹಾರ್ಟ್ ಫೇಲ್ಯೂರ್ ಚಿಕಿತ್ಸೆ, ಹೃದಯ ಬಡಿತಲ್ಲಿನ ರೋಗಗಳ ಚಿಕಿತ್ಸೆ ಇತ್ಯಾದಿಗಳ ಬಗ್ಗೆ ಸಂವಾದ ನಡೆಸಿದರು.

ಈ ವಿಚಾರಗೋಷ್ಠಿಯಲ್ಲಿ ಹಲವಾರು ವೈದ್ಯರು, ವೈದ್ಯ ವಿದ್ಯಾರ್ಥಿಗಳು, ಜೆಎಸ್ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ಎಂ.ಡಿ.ರವಿ, ಹೃದಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ನಾಗರಾಜ ದೇಸಾಯಿ ಮತ್ತಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

comments

Related Articles

error: