ಪ್ರಮುಖ ಸುದ್ದಿ

ಸ್ಟಾರ್ ಹೋಟೆಲ್ ನಲ್ಲಿ ನಡೆದ ಗಲಾಟೆ ಪ್ರಕರಣ : ನಿರ್ಮಾಪಕಿ ವಂದನಾ ಜೈನ್ ವಿರುದ್ಧ ನಟಿ ಸಂಜನಾ ಗಿರ್ಲಾನಿ ದೂರು

ರಾಜ್ಯ(ಬೆಂಗಳೂರು)ಡಿ.28:- ಬೆಂಗಳೂರಿನ ಸ್ಟಾರ್ ಹೋಟೆಲ್ ನಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕಿ ವಂದನಾ ಜೈನ್ ವಿರುದ್ಧ ನಟಿ ಸಂಜನಾ ಗಿರ್ಲಾನಿ ಕೇಂದ್ರ ವಿಭಾಗದ ಡಿಸಿಪಿಗೆ ದೂರು ನೀಡಿದ್ದಾರೆ.

ನಗರದ ರಿಚ್ಮಂಡ್ ಟೌನ್‌  ಬಳಿಯ ಸ್ಟಾರ್ ಹೋಟೆಲೊಂದರಲ್ಲಿ ನಿರ್ಮಾಪಕಿ ವಂದನಾ ಜೈನ್ ಮತ್ತು ನಟಿ ಸಂಜನಾ ನಡುವೆ ಕಿತ್ತಾಟ ನಡೆದಿತ್ತು. ಈ ಸಂಬಂಧ ನಟಿ ಸಂಜನಾ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವಂದನಾ ಜೈನ್ ಆರೋಪಿಸಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದಾದ ಬಳಿಕ ವಂದನಾ ಜೈನ್ ವಿರುದ್ಧ  ಆರೋಪಗಳ ಸುರಿಮಳೆ ಸುರಿಸಿದ್ದ ನಟಿ ಸಂಜನಾ ಪೊಲೀಸ್ ಕಮಿಷನರ್ ಗೆ ವಂದನಾ ಜೈನ್ ವಿರುದ್ಧ ದೂರು ನೀಡಿದ್ದರು. ಇದೀಗ ತಾಯಿ ಮತ್ತು ವಕೀಲರ ಜತೆ ಕೇಂದ್ರ ವಿಭಾಗದ ಡಿಸಿಪಿ ಕಚೇರಿಗೆ ಆಗಮಿಸಿ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಅವರಿಗೂ  ವಂದನಾ ಜೈನ್ ವಿರುದ್ಧ ದೂರು ಸಲ್ಲಿಕೆ ಮಾಡಿದ್ದಾರೆ.

ದೂರು ನೀಡಿದ ಬಳಿಕ ಮಾತನಾಡಿದ ನಟಿ ಸಂಜನಾ, ನಾನು ಕಾನೂನು ಪ್ರಕಾರ ದೂರು ನೀಡಿದ್ದೇನೆ. ಜೈಲಿನಲ್ಲಿ ಹಾಕಿಸಿ ಕೊಲೆ ಮಾಡಿಸುವ ಬೆದರಿಕೆ ಹಾಕಿದ್ದಾರೆ. ನಾನು ವಿಸ್ಕಿ ಬಾಟಲ್ ನಿಂದ ಹಲ್ಲೆ ಮಾಡಿಲ್ಲ. ಹಲ್ಲೆ ಮಾಡಿದ್ದರೆ ಮುಖದ ಮೇಲೆ ಗಾಯ ಇರಬೇಕಿತ್ತು. ಯಾಕೆ ಇಲ್ಲ. ಹೀಗಾಗಿ ನನಗೆ ಬ್ಲಾಕ್ ಮೇಲ್ ಮಾಡಿದ್ದ ಬಗ್ಗೆ ದೂರಿನಲ್ಲಿ ವಿವರಿಸಿದ್ದೇನೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: