ಮೈಸೂರು

ಅನುದಾನ ವಿನಿಯೋಗದಲ್ಲಿನ ವಂಚನೆ ವಿರೋಧಿಸಿ ಪ್ರತಿಭಟನೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರಿಗೆ ಮುಂಗಡಪತ್ರದಲ್ಲಿ ಕಾಯ್ದಿರಿಸಿದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ವಿನಿಯೋಗಿಸದೇ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ವೇದಿಕೆ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಹಣ ಬಿಡುಗಡೆಯಾಗುತ್ತಿಲ್ಲ. ಅನುದಾನದಲ್ಲಿ ಶೇ.೫೦ ರಷ್ಟು ಹಣ ಬಳಕೆಯಾಗುತ್ತಿಲ್ಲ. ಮಾರ್ಚ್ ಕೊನೆಯಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಾರೆ. ಅಧಿಕಾರಿಗಳು ಹಾಗೂ ಸರ್ಕಾರ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. 10 ವರ್ಷದಲ್ಲಿ ದಲಿತರಿಗೆ ಎಷ್ಟು ಅನುದಾನ ಹಾಗೂ ಯೋಜನೆ‌ ರೂಪುಗೊಂಡಿದೆ ಎಂದು ಮಾಹಿತಿ‌ ನೀಡಬೇಕು. ಇದರಲ್ಲಿ ಕೊರತೆ ಕಂಡು ಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಧನಗಳ್ಳಿ ಸಿದ್ದಲಿಂಗಮೂರ್ತಿ, ಹಿನಕಲ್ ಸೋಮು, ಹೆಚ್.ಎನ್.ನಂಜುಂಡರಾಜು, ನಾಗನಹಳ್ಳಿ ಎಂ.ರೇವಣ್ಣ, ಕೆ.ಶಂಕರ್, ದಿನೇಶ್, ಶ್ರೀನಿವಾಸ್, ಸಿದ್ದರಾಜು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

comments

Related Articles

error: