ಮೈಸೂರು

ತಪಾಸಣೆ ಮಾಡಿ ಆರೋಗ್ಯ ಕಾಪಾಡಿ ಕೊಳ್ಳಲು ಆರೋಗ್ಯ ತಪಾಸಣಾ ಶಿಬಿರ ಸಹಾಯಕ : ನಗರ ಪೊಲೀಸ್ ಆಯುಕ್ತ  ಕೆ.ಟಿ.ಬಾಲಕೃಷ್ಣ

‘ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ'ಕ್ಕೆ ಚಾಲನೆ

 ಮೈಸೂರು,ಡಿ.28:-  ರಾಷ್ಟ್ರೀಯ ಆಯುರ್ವೇದ ದಿನಾಚರಣೆ 2019ರ ಪ್ರಯುಕ್ತ ‘ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ’ ವನ್ನು ಇಂದು ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿತ್ತು.

ಮೈಸೂರು ನಗರ ಪೊಲೀಸ್ ಆಯುಕ್ತ  ಕೆ.ಟಿ.ಬಾಲಕೃಷ್ಣ  ಗಿಡಕ್ಕೆ ನೀರೆರೆಯುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು  ಪತ್ರಕರ್ತ ಸದಸ್ಯರಿಗೆ ಆರೋಗ್ಯ ತಪಾಸಣೆಯ ಉತ್ತಮ ಕಾರ್ಯ ನಡೆಯುತ್ತಿದೆ. ಇದು ಎಲ್ಲರೂ ತಪಾಸಣೆ ಮಾಡಿ ಆರೋಗ್ಯ ಕಾಪಾಡಿ ಕೊಳ್ಳಲು ಸಹಾಯಕವಾಗಿದೆ.ಆರೋಗ್ಯ ತಪಾಸಣಾ ಶಿಬಿರ ಒಂದು ಯಶಸ್ವೀ ಕಾರ್ಯ ಕ್ರಮವಾಗಲಿ ಎಂದು ಶುಭ ಹಾರೈಸಿದರು.

ಪತ್ರಿಕೋದ್ಯಮ ಎಂದರೆ ಬರವಣಿಗೆ, ಸದಾ ಸುದ್ದಿ ಮಾಡುವುದು ಎಂಬುದು ಸಾರ್ವಜನಿಕರ ಭಾವನೆಯಾಗಿದೆ. ಆದರೆ ಸಂಘ ಆರೋಗ್ಯ ಶಿಬಿರ ನಡೆಸುವ ಮೂಲಕ ಸೇವೆ ಯಲ್ಲಿರುವವರಿಗೆ ಸೇವೆ ಒದಗಿಸುತ್ತಿರುವ ಕೆಲಸ ಶ್ಲಾಘನೀಯ ಎಂದರು.

ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಮಾತನಾಡಿ, ನೂರು ವರ್ಷ ಬದುಕ ಬೇಕೆಂದರೆ ಒಳ್ಳೆಯ ಕೆಲಸ ಮಾಡುತ್ತ, ನಗುತ್ತ ಬಾಳಬೇಕಿದೆ. ಇದಕ್ಕೆ ಉಪಕಾರ ಮಾಡುವುದು ಆಯುರ್ವೇದ ಆಗಿದೆ. ಮನುಷ್ಯನ ಆರೋಗ್ಯ ಹೆಚ್ಚಿಸುವಲ್ಲಿ ಆಯುರ್ವೇದವೂ ಸಹಕಾರಿಯಾಗಿದೆ. ಆರೋಗ್ಯ ಸೇವೆಯೊಂದಿಗೆ ಉಚಿತ ಔಷಧಿಗಳನ್ನು ನೀಡಲಾಗುತ್ತಿದ್ದು  ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.

ಎಲ್ಲರಿಗೂ ಆರೋಗ್ಯ ಸಿಗುವಂತೆ ಮಾಡುತ್ತಿರುವ ಈ ಕಾರ್ಯಕ್ರಮ ಸಂತಸ ತಂದಿದೆ. ಆರೋಗ್ಯ ಮುಖ್ಯ. ನೂರಾರು ವರ್ಷಗಳ ಕಾಲ ಬದುಕಬೇಕು. ಸದಾ ನಗು ನಗುತ್ತ ಒಳ್ಳೆಯ ಕಾರ್ಯ ಮಾಡಬೇಕು. ಆರೋಗ್ಯ ತಪಾಸಣೆ ಪತ್ರಕರ್ತರಿಗೆ   ಅತ್ಯವಶ್ಯಕ. ದೇವರ ಅನುಗ್ರಹ ಸಿಗಲಿ  ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭ ಶಾಸಕ ಎಲ್.ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: