ಮೈಸೂರು

ಸೆಪ್ಟೆಂಬರ್ 28: ಸ್ಪೆಶಲ್ ಐಟಿ ಕಾನ್ಫರೆನ್ಸ್

ಆಧುನಿಕತೆಗೆ ತಕ್ಕಂತೆ ತಂತ್ರಜ್ಞಾನ  ಮುಂದುವರಿದಿದೆ. ಕಲಿಯುವಿಕೆ ಮತ್ತು ಉತ್ಪಾದನೆ, ಸೇವೆ, ಮಾದರಿಗಳಲ್ಲಿ  ಬದಲಾವಣೆ, ಮತ್ತು ಅಭಿವೃದ್ಧಿ ನಾವೀನ್ಯತೆ ನಿರಂತರ . ಭಾರತದಲ್ಲಿ ಇವೆಲ್ಲವೂ ತನ್ನ ಸ್ಥಾನವನ್ನು ಕಾಯ್ದುಕೊಂಡಿದ್ದು, ಆರ್ಥಿಕ ಶಕ್ತಿಯನ್ನು ವೃದ್ಧಿಸುವತ್ತ ದಾಪುಗಾಲಿಡುತ್ತಿದೆ  ಎಂದು ಮೈಸೂರು ಸಿಐಐ ಐಟಿ ಪೆನೆಲ್ ನ ಸಂಯೋಜಕ ಭಾಸ್ಕರ ಕಳಲೆ ಹೇಳಿದರು.

ಸಿಐಐ ಮೈಸೂರು ಐಟಿ ಕಾನ್ಫರೆನ್ಸ್ ನ್ನು ಹೆಬ್ಬಾಳದ ಕೆಐಎಡಿಬಿ ಕೈಗಾರಿಕಾ ವಲಯದಲ್ಲಿ ಸೆಪ್ಟೆಂಬರ್ 28ರಂದು ಎಲ್&ಟಿ ಕಾರ್ಪೊರೇಟ್ ಟೆಕ್ನಿಕಲ್ ಟ್ರೇನಿಂಗ್ ನ್ನು ಹಮ್ಮಿಕೊಂಡಿದೆ.

ಸಿಐಐ ಮೈಸೂರು ಐಟಿ ಕಾನ್ಫರೆನ್ಸ್ ತಿಳುವಳಿಕೆ ಮತ್ತು ಹೊಸ ತಂತ್ರಜ್ಞಾನದ ಅಭಿವೃದ್ಧಿಗೆ ಉತ್ತಮ ವೇದಿಕೆ ಕಲ್ಪಸಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9844785965ನ್ನು ಸಂಪರ್ಕಿಸಬಹುದು.

Leave a Reply

comments

Tags

Related Articles

error: