ಕ್ರೀಡೆಪ್ರಮುಖ ಸುದ್ದಿ

ಕೆಎಸ್‍ಎ ಹಾಕಿ ಪಂದ್ಯಾವಳಿ : ಕೊಡವಾಮೆ ತಂಡ ಚಾಂಪಿಯನ್

ರಾಜ್ಯ( ಮಡಿಕೇರಿ) ಡಿ.30 :- ಕೆಎಸ್‍ಎ ವತಿಯಿಂದ ಮಂಗಳೂರಿನ ಕರಾವಳಿ ಮೈದಾನದಲ್ಲಿ ನಡೆದ ವಾರ್ಷಿಕ ಹಾಕಿ ಪಂದ್ಯಾವಳಿಯಲ್ಲಿ ಕೊಡವಾಮೆ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಟೀಮ್ ಮಾರ್ನಿಂಗ್ ಬಾಯ್ಸ್ ತಂಡ ದ್ವೀತಿಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಮುಖ್ಯ ಅತಿಥಿಗಳಾಗಿ ಅಂತರರಾಷ್ಟ್ರೀಯ ಕ್ರೀಡಾಪಟು ಶ್ರೀಮಾ ಸೋಮಯ್ಯ, ದಕ್ಷಿಣ ಕನ್ನಡ ಹಾಕಿ ಅಧ್ಯಕ್ಷ ರತನ್ ಸಿಕ್ವೆರಾ, ಕೆಎಎಸ್ ಅಧ್ಯಕ್ಷ ಕೆಟೋಳಿರ ವಿಕಾಸ್ ತಿಮ್ಮಯ್ಯ, ಸಲಹೆಗಾರ ಬಟ್ಟೀರ ಅಜಿತ್, ಸೋಮೆಯಂಡ ಚೆಂಗಪ್ಪ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು. ಪಂದ್ಯಾವಳಿಯಲ್ಲಿ ಸುಮಾರು ಹತ್ತು ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಿದವು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: