
ಮೈಸೂರು
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ತಗಡೂರು ರಾಮಚಂದ್ರರಾವ್ ಅವರ 31ನೇ ಪುಣ್ಯಸ್ಮರಣೆ
ಮೈಸೂರು,ಡಿ.30:- ಕರ್ನಾಟಕದ ಗಾಂಧಿ’ ಎಂದು ಬಿರುದು ಪಡೆದಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ತಗಡೂರು ರಾಮಚಂದ್ರರಾವ್ ಅವರ 31ನೇ ಪುಣ್ಯಸ್ಮರಣೆಯ ಅಂಗವಾಗಿ ನಗರದ ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನ ವನದಲ್ಲಿ ನಿನ್ನೆ ಮೂಗುರು ಕರ್ನಾಟಕ ಬ್ರಾಹ್ಮಣ ಸಂಘದ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು,
ನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ಮಾತನಾಡಿ ರಾಮಚಂದ್ರ ರಾವ್ ಅವರು ಮಹಾತ್ಮ ಗಾಂಧಿಯವರ ಅನುಯಾಯಿಯಾಗಿದ್ದು, ಸತ್ಯಾಗ್ರಹ ಚಳುವಳಿಯಿಂದ ತೀವ್ರ ಪ್ರಭಾವಿತರಾಗಿದ್ದರು. 1928 ರಲ್ಲಿ ಸೈಮನ್ ಆಯೋಗದ ಭಾರತ ಭೇಟಿಯನ್ನು ವಿರೋಧಿಸಿದ್ದಕ್ಕಾಗಿ ರಾಮಚಂದ್ರ ರಾವ್ ಅವರನ್ನು ಬಂಧಿಸಲಾಯಿತು. ಮೈಸೂರು ರಾಜ್ಯದ ಮೊದಲ ರಾಜಕೀಯ ಖೈದಿಯಾಗಿದ್ದರು. ಅವರು ಮೈಸೂರು ಗಾಂಧಿ ಎಂದು ಜನಪ್ರಿಯರಾಗಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ವಿಶ್ವನಾಥಯ್ಯ, ಪದಾಧಿಕಾರಿಗಳಾದ ಲೋಕೇಶ್ ರಾವ್, ಮಹೇಶ್, ಆರ್ ಎಸ್ ಕುಮಾರ್, ನಂದ ಕುಮಾರ್, ಅಜಿತ್, ಹೊಮ್ಮ ಮಂಜುನಾಥ್, ಗುರುರಾಜ್ ಮತ್ತಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)