ಮೈಸೂರು

ಮಹಿಳಾ ಸಾಧಕರಿಗೆ ‘ಮಹಿಳಾ ರತ್ನ’ ಪ್ರಶಸ್ತಿ ಪ್ರದಾನ

ನನ್ನೆಲ್ಲಾ ಕಾರ್ಯದ ಹಿಂದೆ ಪತ್ನಿ ಬೆಂಬಲವಾಗಿದ್ದು, ನನ್ನ ಸಾಧನೆಗೆ ಪತ್ನಿಯೂ ಕಾರಣ ಎಂದು ಮೇಯರ್ ಎಂ.ಜೆ. ರವಿಕುಮಾರ್ ಹೇಳಿದರು.

ಮಂಗಳವಾರ ಜಿಲ್ಲಾ ಪತ್ರಕರ್ತರ ಭವನದಲ್ಲಿ ಪ್ರಜ್ಞಾವಂತ ನಾಗರಿಕರ ವೇದಿಕೆ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕಿಯರಿಗೆ ಮಹಿಳಾ ರತ್ನ ಪ್ರಶಸ್ತಿ ಪ್ರದಾನದ ಬಳಿಕ ಮಾತನಾಡಿದ ಅವರು, ನನ್ನ ಸಾರ್ವಜನಿಕ ಜೀವನವನ್ನು ಸರಿದೂಗಿಸಿಕೊಂಡು ಮತ್ತು ಮನೆ-ಸಂಸಾರದ ಹೊಣೆಯನ್ನು ಹೊತ್ತು ನನ್ನೆಲ್ಲಾ ಕಾರ್ಯಚಟುವಟಿಕೆ ಹಿಂದೆ ಪತ್ನಿ ಬೆನ್ನೆಲುಬಾಗಿದ್ದಾರೆ ಎಂದರು.
ಬಸವಕೇಂದ್ರದ ಮುಖ್ಯಸ್ಥೆ ಮಾತಾ ಬಸವಾಂಜಲಿ ಮಾತನಾಡಿ, ಸ್ತ್ರೀ ಎಂಬುದೊಂದು ಶಕ್ತಿ ಇದ್ದಂತೆ ಹಾಗೂ ಪುರುಷ ಎಂಬುದು ಒಂದು ಶಕ್ತಿಯೇ. ಸ್ತ್ರೀ ಮತ್ತು ಪುರುಷ ಒಬ್ಬರಿಗೊಬ್ಬರು ಪ್ರೇರಕ ಶಕ್ತಿಯಾಗಬೇಕು. ವೇದಕಾಲ, ಸ್ವಾತಂತ್ರ್ಯ ಹೋರಾಟ ಮತ್ತು ಇಂದಿನ ಆಧುನಿಕ ಸಮಾಜದಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ ಎಂದರು.

ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಲಕ್ಷ್ಮೀ, ಸಾಮಾಜಿಕ ಕ್ಷೇತ್ರದಲ್ಲಿ ರಾಣಿ ಪ್ರಭಾ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸವಿತ, ಪೊಲೀಸ್ ಇಲಾಖೆಯಲ್ಲಿ ಸುಂದರಿ, ಶಿಕ್ಷಣ ಕ್ಷೇತ್ರದಲ್ಲಿ ಮಂಜುಳ, ಸ್ವಚ್ಛ ಭಾರತ್ ರೂವಾರಿ ಸುಮತಿ, ಕ್ರೀಡಾ ಕ್ಷೇತ್ರದಲ್ಲಿ ಗೀತಾ, ಶುಶ್ರೂಷಕಿ ಮಲ್ಲಿಗೆ, ಆಯ ಸುಶೀಲಮ್ಮ – ಒಟ್ಟು 9 ಮಹಿಳೆಯರಿಗೆ ‘ಮಹಿಳಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಸವಕೇಂದ್ರದ ಮಾತಾ ಬಸವಾಂಜಲಿ ಕಾರ್ಯಕ್ರಮದ ದಿವ್ಯ ಸಾನಿಧ‍್ಯ ವಹಿಸಿದ್ದರು. ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಅಧ‍್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೇಯರ್ ರವಿಕುಮಾರ್ ಎಂ.ಜೆ, ಮೃಗಾಲಯ ಪ್ರಾಧಿಕಾರದ ಅಧ‍್ಯಕ್ಷೆ ಮಲ್ಲಿಗೆ ವೀರೇಶ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ‍್ಯಕ್ಷ ಡಿ.ಟಿ.ಪ್ರಕಾ‍ಶ್, ನಗರ ಪಾಲಿಕೆ ಸದಸ್ಯ ಮಾ.ವಿ.ರಾಮ್ ಪ್ರಸಾದ್, ಮಾಜಿ ನಗರ ಪಾಲಿಕೆ ಸದಸ್ಯ ಎಂ.ಡಿ.ಪಾರ್ಥಸಾರಥಿ, ರಘು, ವೇದಿಕೆಯ ಅಧ್ಯಕ್ಷ ಜಗದೀಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: