ಮೈಸೂರು

ಕಳ್ಳತನವಾಗಿದ್ದ ಬೆಲೆಬಾಳುವ ಶ್ವಾನದ ಮರಿಗಳನ್ನು ಒಂದೇ ದಿನದಲ್ಲಿ ಪತ್ತೆ ಹಚ್ಚಿ ಮಾಲೀಕರಿಗೆ ಒಪ್ಪಿಸಿದ ಪೊಲೀಸರು

ಮೈಸೂರು,ಡಿ.30:- ಇಲ್ಲಿನ ಲೋಕನಾಯಕ ನಗರದಿಂದ ಕಳ್ಳತನವಾಗಿದ್ದ ಬೆಲೆಬಾಳುವ ಶ್ವಾನದಮರಿಗಳನ್ನು ಮೇಟಗಳ್ಳಿ ಠಾಣಾ ಪೊಲೀಸರು ಒಂದೇ ದಿನದಲ್ಲಿ ಪತ್ತೆ ಹಚ್ಚಿ ಮಾಲೀಕರಿಗೆ ಒಪ್ಪಿಸಿದ್ದಾರೆ.

ಮೈಸೂರಿನ ಹೆಬ್ಬಾಳ ಬಡಾವಣೆಯ ಲೋಕನಾಯಕ ನಗರದ ಮನೆಯಿಂದ  ಡಿ.27ರಂದು ಸಂಜೆ 4ಗಂಟೆಯವೇಳೆಗೆ ಮುಂಬೈ ನಿವಾಸಿಗಳಾದ ಶೃತಿ ಮತ್ತು ರಿಶಾಲ್ ವಾಲ್ಯ ಅವರಿಗೆ ಸೇರಿದ ಶ್ವಾನದ ಮರಿಗಳನ್ನು ಕಳುವು ಮಾಡಲಾಗಿತ್ತು. ವಿಷಯ ತಿಳಿದ ತಕ್ಷಣ ಕಾರ್ಯಾಚರಣೆ ನಡೆಸಿದ ಮೇಟಗಳ್ಳಿ ಪೊಲೀಸರು ಸುಳಿವಿನ ಬೆನ್ನತ್ತಿದಾಗ ಶ್ವಾನದ ಮರಿಗಳನ್ನು ಕೆಆರ್ ಎಸ್ ರಸ್ತೆಯ ಮೊಗರಹಳ್ಳಿ ಮಂಟಿಯಲ್ಲಿರುವ ಡಾಗ್ ಕೆನೆನ್ ಮಾಲೀಕ ಕೌಟಿಲ್ಯ ಎಂಬವರಿಗೆ ಮಾರಾಟ ಮಾಡಲಾಗಿದೆ ಎಂಬುದು ತಿಳಿಯಿತು. ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರಿಗೆ ಶೃತಿ ಅವರ ಶ್ವಾನದ ಮರಿಗಳನ್ನು ಯಾರೋ ಇಬ್ಬರು ತಂದು ನನಗೆ ಐದು ಸಾವಿರ ರೂ.ಗಳಿಗೆ ಮಾರಿದ್ದಾಗಿ ಕೌಟಿಲ್ಯ ತಿಳಿಸಿದ್ದು, ನಾಯಿ ಮರಿಗಳನ್ನು ವಶಕ್ಕೆ ಪಡೆದ ಪೊಲೀಸರು ಮಾಲೀಕರಿಗೆ ಒಪ್ಪಿಸಿದ್ದಾರೆ.

ಎನ್. ಆರ್ ಉಪವಿಭಾಗದ ಎಸಿಪಿ ಶಿವಶಂಕರ್ ಮಾರ್ಗದರ್ಶನದಲ್ಲಿ ನಡೆದ ಶ್ವಾನದಮರಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಮೇಟಗಳ್ಳಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಗಳಾದ ವಿಶ್ವನಾಥ್, ನಾಗರಾಜ್ ನಾಯಕ್, ಎಎಸ್ ಐ ಪೊನ್ನಪ್ಪ, ಸಿಬ್ಬಂದಿಗಳಾದ ಸುರೇಶ್, ಆಶಾ ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: