ಮೈಸೂರು

ಗಂಗೋತ್ರಿ ಪದವಿ ಪೂರ್ವ ಕಾಲೇಜಿನಲ್ಲಿ ‘ಸ್ಪಿರಿಟ್ ವೀಕ್’

ಮೈಸೂರು, ಡಿ.30:- ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಒಂದು ವಾರ ಪೂರ್ತಿ ‘ಸ್ಪಿರಿಟ್ ವೀಕ್’ ಅನ್ನು ಆಚರಿಸಲಾಯಿತು.

ಸೋಮವಾರ ‘ಟ್ವಿನ್ಸ್ ಡೇ’, ಮಂಗಳವಾರ ‘ರೆಟ್ರೋ ಡೇ’, ಗುರುವಾರ ‘ಏಂಜಲ್ ವರ್ಸಸ್ ಡೆವಿಲ್ ಡೇ’ ಮತ್ತು ‘ಹೀರೋ ವರ್ಸಸ್ ವಿಲ್ಲನ್ ಡೇ’, ಶುಕ್ರವಾರ ‘ಮಿಸ್ ಮ್ಯಾಚ್ ಡೇ’ ಹಾಗೂ ಶನಿವಾರ ‘ಎತ್ನಿಕ್ ಡೇ’ ಅನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಎಂ.ಎಸ್.ಸುನಿಲ್ ಕುಮಾರ್, ಉಪನ್ಯಾಸಕರಾದ ವಿ.ಅಪೂರ್ವ, ಬಸಪ್ಪ, ಎನ್.ರೂಪ, ಆರ್.ಚೈತ್ರ, ಹೆಚ್.ಎ.ಉಮೇಶ್, ಎಸ್.ಶಿಲ್ಪ ಹಾಗೂ ರಾಮಕುಮಾರ್ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: