ಮೈಸೂರು

ಸೋಮಶೇಖರಗೌಡ ಅವರಿಗೆ ಜಿಇಎಂ ಆಫ್ ಇಂಡಿಯಾ ಅವಾರ್ಡ್

ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸಮಾಜ ಸೇವಕ ವಿ.ಎಸ್.ಸೋಮಶೇಖರಗೌಡ ಅವರಿಗೆ ಆಲ್ ಇಂಡಿಯಾ ಅಚೀವರ್ಸ್ ಕಾನ್ಫರೆನ್ಸ್ ವತಿಯಿಂದ ಜಿಇಎಂ ಆಫ್ ಇಂಡಿಯಾ ಅವಾರ್ಡ್ ಅನ್ನು ನೀಡಿ ಗೌರವಿಸಲಾಗಿದೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ 82ನೇ ನ್ಯಾಷನಲ್ ಸೆಮಿನಾರ್ ಕಾರ್ಯಕ್ರಮದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಕ್ಕೆ ಮೆಚ್ಚಿ ಎಐಎಸಿಯ ಮುಖ್ಯಸ್ಥ ಡಾ.ಎಚ್.ಬಿ.ಚರ್ತುವೇದಿ ಅವಾರ್ಡ್ ಪ್ರದಾನ ಮಾಡಿದ್ದಾರೆ ಎಂದು ಸ್ನೇಕ್ ಶ್ಯಾಮ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೋಮಶೇಖರ್‍ಗೌಡರು ಎಲೆ ಮರೆಕಾಯಿಯಂತೆ ಸಮಾಜ ಸೇವೆ ಮಾಡುತ್ತಿದ್ದು, ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಗಪ್ಪಿ ಮೀನುಗಳ ಸಾಕಣೆ ಹಾಗೂ ವಿತರಣೆಯಿಂದ ಸೊಳ್ಳೆಗಳ ನಿಯಂತ್ರಣಕ್ಕೆ ನಾಂದಿ ಹಾಡಿದ್ದಾರೆ. ಇಂತಹವರನ್ನು ಪ್ರೋತ್ಸಾಹಿಸಬೇಕು ಎಂದು ಕೋರಿಕೊಂಡರು. ಪ್ರಶಸ್ತಿ ವಿಜೇತ ವಿ.ಎಸ್.ಸೋಮಶೇಖರ ಗೌಡ ಇದ್ದರು.

Leave a Reply

comments

Related Articles

error: