ಮನರಂಜನೆಮೈಸೂರು

ಕಾದಂಬರಿ ಆಧಾರಿತ ಚಿತ್ರ ಇಂಡಿಯಾ ವರ್ಸಸ್ ಇಂಗ್ಲೆಂಡ್ ಜ.24ರಂದು ತೆರೆಗೆ

ಮೈಸೂರು,ಡಿ.30:- ಕಾದಂಬರಿ ಆಧಾರಿತ ಚಿತ್ರ ಇಂಡಿಯಾ ವರ್ಸಸ್ ಇಂಗ್ಲೆಂಡ್ ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ನಲ್ಲಿ ಮೂಡಿ ಬಂದಿದ್ದು, ಜ.24ರಂದು ತೆರೆ ಕಾಣಲಿದೆ ಎಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿನಿಮಾದ ಬಹುತೇಕ ಚಿತ್ರೀಕರಣ ವಿದೇಶ ಸೇರಿದಂತೆ, ಮೈಸೂರು ಉತ್ತರ ಭಾರತದ ಪ್ರಸಿದ್ಧ ಸ್ಥಳಗಳಲ್ಲಿ ನಡೆದಿದೆ. ನಟ ವಸಿಷ್ಠಸಿಂಹ, ನಟಿ ಮಾನ್ವಿತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಖ್ಯಾತ ನಟರಾದ ಅನಂತ್ ನಾಗ್, ಸಾಧುಕೋಕಿಲ, ಸುಮಲತಾ ಅಂಬರೀಶ್, ಪ್ರಕಾಶ್ ಬೆಳವಾಡಿ, ನಿರ್ದೇಶಕ ಶಿವಮಣಿ ಸೇರಿದಂತೆ ದೊಡ್ಡ ತಾರಾಗಣದಲ್ಲಿ ಮೂಡಿಬಂದಿದೆ ಎಂದರು.

ನನ್ನ ಮಗಳು ಕನಸು ಬರೆದಿರುವ ಅಕ್ಷಾಂಶ-ರೇಖಾಂಶ ಕಾದಂಬರಿ ಆಧಾರಿತ ಚಿತ್ರವಿದಾಗಿದ್ದು, ಸತ್ಯ ಹೆಗಡೆ, ಕೃಷ್ಣಕುಮಾರ್, ವಿಲ್ ಪ್ರೆಸ್ ಛಾಯಾಗ್ರಹಣವಿರಲಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಐದು ವಿಭಿನ್ನ ಹಾಡುಗಳು ಮೂಡಿ ಬಂದಿವೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ನಟ ವಸಿಷ್ಠ ಸಿಂಹ, ನಿರ್ಮಾಪಕ ವೈ.ಎನ್ ಶಂಕರೇಗೌಡ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: