ಮೈಸೂರು

ಹೊಸ ವರ್ಷಾಚರಣೆ : ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕ ಪ್ರವೇಶ  ನಿರ್ಬಂಧಿಸಿ ಅಧಿಸೂಚನೆ ಹೊರಡಿಸಿದ ಆಯುಕ್ತ ಕೆ.ಟಿ.ಬಾಲಕೃಷ್ಣ  

ಮೈಸೂರು,ಡಿ.30:- ಮೈಸೂರು ನಗರದಲ್ಲಿ ಹೊಸ ವರ್ಷಾಚರಣೆಯ ಸಂಬಂಧ ಸಾರ್ವಜನಿಕರು ಐತಿಹಾಸಿಕ ಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ರಾತ್ರಿ ವೇಳೆಯಲ್ಲಿ ಹೋಗಿ ಹೊಸ ವರ್ಷಾಚರಣೆಯ ಸಮಯದಲ್ಲಿ ಚಾಮುಂಡಿ ಬೆಟ್ಟದ ರಸ್ತೆಗಳಲ್ಲಿ ಮತ್ತು ವ್ಯೂ ಪಾಯಿಂಟ್ ಸ್ಥಳವನ್ನು ಮೋಜಿನ ತಾಣವಾಗಿ ಪರಿವರ್ತಿಸಿಕೊಂಡು, ಮದ್ಯಪಾನ ಮಾಡಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟು ಮಾಡುವ ಸಾಧ್ಯತೆ ಇದ್ದು, ಇದರಿಂದ ಇತರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ.

ಅಲ್ಲದೇ ಹೊಸ ವರ್ಷಾಚರಣೆ ಸಂಬಂಧ ಯುವಕ ಯುವತಿಯರು ಮಧ್ಯರಾತ್ರಿಯಲ್ಲಿ ಕಾಡಿನ ಒಳಗೆ ಹೋಗುವುದರಿಂದ ಇವರ ಮೇಲೆ ಅಪರಾಧ ಕೃತ್ಯಗಳು ನಡೆಯುವ ಸಾಧ್ಯತೆಗಳು ಇರುತ್ತವೆ.  ಆದ್ದರಿಂದ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಹಾಗೂ ಸಾರ್ವಜನಿಕರ ಸುರಕ್ಷತೆ ಹಿತದೃಷ್ಟಿಯಿಂದ  ಚಾಮುಂಡಿ ಬೆಟ್ಟಕ್ಕೆ ತೆರಳುವ ರಸ್ತೆಗಳಾದ   ಉತ್ತನಹಳ್ಳಿ ಗೇಟ್, ದೈವೀವನ ಗೇಟ್, ಲಲಿತಮಹಲ್ ಗೇಟ್ ಹಾಗೂ  ಚಾಮುಂಡಿಬೆಟ್ಟದ ಪಾದದ ಬಳಿ ಇರುವ ಗೇಟ್‍ಗಳಲ್ಲಿ   31-12-2019 ರ ಸಂಜೆ 7  ಗಂಟೆಯಿಂದ   01-01-2020 ಬೆಳಿಗ್ಗೆ  6 ಗಂಟೆಯವರೆಗೂ ಹಾಗೂ ಚಾಮುಂಡಿಬೆಟ್ಟಕ್ಕೆ ಪ್ರಮುಖ ದಾರಿ ಕಲ್ಪಿಸುವ   ತಾವರೆಕಟ್ಟೆ ಗೇಟ್‍ನಲ್ಲಿ   31-12-2019 ರ ರಾತ್ರಿ 9 ಗಂಟೆಯಿಂದ   01-01-2020 ಬೆಳಿಗ್ಗೆ 6 ಗಂಟೆಯವರೆಗೆ ಚಾಮುಂಡಿಬೆಟ್ಟದ ನಿವಾಸಿಗಳನ್ನು ಹೊರತು ಪಡಿಸಿ ಚಾಮುಂಡಿಬೆಟ್ಟಕ್ಕೆ ತೆರಳುವ ಎಲ್ಲಾ ಸಾರ್ವಜನಿಕ ವಾಹನಗಳ ಪ್ರವೇಶವನ್ನು ನಿರ್ಬಂಧಿಸಿ ಮೈಸೂರು ನಗರದ ಪೊಲೀಸ್ ಆಯುಕ್ತರಾದ   ಕೆ.ಟಿ. ಬಾಲಕೃಷ್ಣ  ಅಧಿಸೂಚನೆ ಹೊರಡಿಸಿದ್ದಾರೆ.   (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: