ಕ್ರೀಡೆಪ್ರಮುಖ ಸುದ್ದಿ

ಬೆಂಗಳೂರು ಟೆಸ್ಟ್ ; ಭಾರತಕ್ಕೆ 75 ರನ್‍ಗಳ ಗೆಲುವು

ಬೆಂಗಳೂರು : ಬಾರ್ಡರ್‌-ಗವಾಸ್ಕರ್‌ ಟ್ರೋಫಿಯ ಎರಡನೇ ಟೆಸ್ಟ್‍ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ ಭಾರತ, 75 ರನ್‍ಗಳ ಗೆಲುವು ಸಾಧಿಸಿದೆ. ಈ ಮೂಲಕ ನಾಲ್ಕು ಪಂದ್ಯಗಳ ಸರಣಿ 1-1 ರಲ್ಲಿ ಸಮಬಲವಾಗಿದೆ.

ನಾಲ್ಕನೇ ದಿನ ಭಾರತದ ಚೇತೇಶ್ವರ್‌ ಪೂಜಾರಾ (92) ಹಾಗೂ ಅಜಿಂಕ್ಯಾ ರಹಾನೆ (52) ಆಟದ ನೆರವಿನಿಂದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 200 ಗಡಿ ದಾಟಲು ಸಹಾಯಕವಾಯಿತು. ಇದರಿಂದ ಟೀಂ ಇಂಡಿಯಾ 274 ರನ್‌ ಕಲೆ ಹಾಕಿತು. ಜೊತೆಗೆ ಆಸ್ಟ್ರೇಲಿಯಾಗೆ 188 ರನ್‌ ಗುರಿ ನೀಡಿತು.

ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಕೇವಲ 112 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಈ ಮೂಲಕ ವಿರಾಟ್‌ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮೊದಲ ಪಂದ್ಯದ ಸೋಲಿಗೆ ಉತ್ತರ ನೀಡಿತು. ಆಸ್ಟ್ರೇಲಿಯಾ ಪರ ನಾಯಕ ಸ್ಟೀವ್‌ ಸ್ಮಿತ್‌ (28) ಹಾಗೂ ಪೀಟರ್‌ ಹಾಂಡ್ಸ್‍ಕಂಬ್‌ (24) ಸ್ವಲ್ಪ ಪ್ರತಿರೋಧ ನೀಡಿದರು. ಮಿಕ್ಕ ಆಸೀಸ್‌ ಬ್ಯಾಟ್ಸ್‌ಮನ್‌ಗಳು ಭಾರತದ ಬೌಲಿಂಗ್‌ ದಾಳಿಗೆ ದಿಟ್ಟ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಭಾರತದ ಪರ ಅಶ್ವಿನ್‌ 6 ವಿಕೆಟ್‌ ಪಡೆದು ಮಿಂಚಿದರೆ, ಉಮೇಶ್‌ ಯಾದವ್‌ ಎರಡು ವಿಕೆಟ್‌ ಪಡೆದುಕೊಂಡರು.

Leave a Reply

comments

Related Articles

error: